ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮೂರನೇ ಅಲೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ.
ಈಗಾಗಲೇ ರಾತ್ರಿ 10 ರಿಂದ ಬೆಳಗ್ಗೆ ಐದರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದೀಗ ಮತ್ತಷ್ಟು ನಿರ್ಬಂಧಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ಬರೋದು ನಿಶ್ಚಿತ ಎನ್ನುವ ವಾತಾವರಣ ಇದೆ. ಬೆಂಗಳೂರು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನರ ಜೀವ ಕಾಪಾಡೋದು ಮುಖ್ಯವಾಗಿದೆ ಎಂದು ಎಂದು ಹೇಳಿದ್ದಾರೆ.
ಸಿಎಂ ಸಭೆ ಬಳಿಕ ಸಚಿವ ಆರ್.ಅಶೋಕ್ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೋವಿಡ್, ಓಮಿಕ್ರಾನ್ ಕೇಸ್ಗಳ ಹೆಚ್ಚಳ ಹಿನ್ನೆಲೆ ಕೋವಿಡ್ ಮೂರನೇ ಅಲೆ ಬಗ್ಗೆ ಪ್ರತ್ಯೇಕ ಸಭೆ ಮಾಡೋದಾಗಿ ಸಿಎಂ ಹೇಳಿದ್ದಾರೆ. ಜನವರಿ 7 ಕ್ಕೂ ಮುನ್ನ ಒಂದು ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಹೊಸ ಟಫ್ ರೂಲ್ಸ್ ತರುತ್ತೇವೆ. ತಜ್ಞರು ಮಾಡುವ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡಲಾಗುತ್ತದೆ. ಪಶ್ಚಿಮ ಬಂಗಾಳ, ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಕೊರೊನಾ ಮಾರ್ಗಸೂಚಿ ತರುವ ಕುರಿತಾಗಿ ಸೂಚನೆ ನೀಡಿದ್ದಾರೆ.
PublicNext
02/01/2022 02:48 pm