ನವದೆಹಲಿ : ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಈ ಹಿನ್ನೆಲಯಲ್ಲಿ ಸ್ಯಾನಿಟೈಸರ್ ಕಾರ್ಯವನ್ನು ಖಾಸಗೀಯವರಿಗೆ ಒಪ್ಪಿಸುವ ಯೋಜನೆಗೆ ಹಾಕಲಾಗಿದೆ ಇದಕ್ಕೆ ವಿರೋಧಿ ವ್ಯಕ್ತಪಡಿಸಿ ನಾಲ್ವರು ಶಾಸಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಈ ಕಾರ್ಯ ವಿರೋದಿಸಿ ಪ್ರತಿಭಟನೆ ಹಿಂದೆ ಆಮ್ ಆದ್ಮಿ ಪಕ್ಷದ ಶಾಸಕರ ಕೈವಾಡವಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಕೊಂಡ್ಲಿ ಶಾಸಕ ಕುಲ್ದೀಪ್ ಮೋನು, ಶಾಲಿಮರ್ ಬಾಗ್ ಶಾಸಕ ವಂದನಾ ಕುಮಾರಿ, ಮಾಡೆಲ್ ಕಾಲೋನಿ ಶಾಸಕ ಅಖಿಲೇಶ್ ತ್ರಿಪಾಠಿ, ತ್ರಿಲೋಕಪುರಿ ಶಾಸಕ ರೋಹಿತ್ ಮಹಲಿಯಾನ್ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ನವದೆಹಲಿ ನಾಗರಿಕ ಕೇಂದ್ರದ ಎದುರಿನಲ್ಲಿ ಆಮ್ ಆದ್ಮಿ ಮುಖಂಡ ದುರ್ಗೇಶ್ ಪಥಾಕ್ ಜೊತೆಗೆ 1000 ದಿಂದ 1500 ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೊರೊನಾವೈರಸ್ ಭೀತಿ ನಡುವೆಯೂ ಪ್ರತಿಭಟನಾಕಾರರು ಯಾವುದೇ ಮಾರ್ಗಸೂಚಿಗಳನ್ನು ಪಾಲನೆ ಮಾಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹಾಗಾಗಿ ಸಾಂಕ್ರಾಮಿಕ ರೋಗ ಕಾಯ್ದೆ 3ನೇ ಸೆಕ್ಷನ್ ಅಡಿಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
PublicNext
29/10/2020 07:36 am