ಕೋಲ್ಕತ್ತ: ಕೊರೊನ ಮಾರ್ಗಸೂಚಿ ನಿಯಮಗಳನ್ನು ಎಲ್ಲಡೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಲ್ಲ ಕಡೆಯೂ ಕೊರೊನಾ ಕಾರಣದ ನಿರ್ಬಂಧ ಹೇರುವುದರಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಒಮಿಕ್ರಾನ್ ಸೋಂಕು ವಿದೇಶದಿಂದ ಬಾರತಕ್ಕೆ ಬರುತ್ತಿದೆ ಎಂಬುದು ಸತ್ಯ. ಹೀಗಾಗಿ ಒಮಿಕ್ರಾನ್ ಸೋಂಕಿನ ತೀವ್ರತೆ ಹೆಚ್ಚಾಗಿರುವ ದೇಶಗಳಿಂದ ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬರುವ ವಿಮಾನಗಳಿಗೆ ನಿರ್ಬಂಧ ಹೇರುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಮತಾ ಹೇಳಿದ್ದಾರೆ.
ಎಲ್ಲೆಡೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಆದರೆ ಒಮಿಕ್ರಾನ್ ಸೋಂಕು ಕಂಡು ಬರುವ ಪ್ರದೇಶಗಳಲ್ಲಿ ಜನರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ನಿರ್ಬಂಧ ಹೇರಬಹುದು. ಏಕೆಂದರೆ ಸಾಂಕ್ರಾಮಿಕ ರೋಗ ಕಳೆದ ಎರಡು ವರ್ಷಗಳಂತೆ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಮಮತಾ ಹೇಳಿದ್ದಾರೆ.
PublicNext
30/12/2021 06:54 pm