ಡೆಡ್ಲಿ ಸೋಂಕು ಕೊರೊನಾದಿಂದಾಗಿ ಸಾವನಪ್ಪಿದ ರಾಜಸ್ಥಾನದ ಬಿಜೆಪಿ ನಾಯಕಿ ಮತ್ತು ಶಾಸಕಿ ಕಿರಣ್ ಮಹೇಶ್ವರಿ ಸಾವಿಗೆ ಪ್ರಧಾನಿ ಮೋದಿ,ಸ್ಪೀಕರ್ ಓಂ ಬಿರ್ಲಾ ಸಂತಾಪ ಸೂಚಿಸಿದ್ದಾರೆ.
ಕಿರಣ್ ಮಹೇಶ್ವರಿ 2004ರಿಂದ 2009ರವರೆಗೆ ರಾಜಸ್ಥಾನದ ಉದಯ್ ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದವರು.
ಅಕ್ಟೋಬರ್ ನಲ್ಲಿ ನಡೆದ ಕೋಟಾ ಉತ್ತರ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಕಿರಣ್ ಮಹೇಶ್ವರಿ, ಅದಾದ ಬಳಿಕ ಕೊರೊನಾ ಸೋಂಕಿಗೆ ಒಳಗಾಗಿದ್ದರು.
ಕೊರೊನಾ ಸೋಂಕಿನಿಂಧ ಅದೆಷ್ಟೋ ಪ್ರಮುಖ ರಾಜಕಾರಣಿಗಳು ಜೀವ ಕಳೆದುಕೊಂಡಿದ್ದಾರೆ. ಇದೀಗ ಬಿಜೆಪಿಯ ಶಾಸಕಿಯೋರ್ವರು ಇದೇ ಸೋಂಕಿಗೆ ಬಲಿಯಾಗಿದ್ದಾರೆ.
ನಿನ್ನೆ ಸಂಜೆ ಹರ್ಯಾಣದ ಗುರುಗ್ರಾಮದಲ್ಲಿರುವ ಮೇದಾಂತಾ ಆಸ್ಪತ್ರೆಯಲ್ಲಿ ಮಹೇಶ್ವರಿ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಕಿರಣ್ ಮಹೇಶ್ವರಿ ಅವರ ಅಕಾಲಿಕ ಮರಣ ನೋವು ತಂದಿದೆ. ಬಿಜೆಪಿ ಶಾಸಕಿ, ಸಂಸದೆ, ರಾಜಸ್ಥಾನದ ಸಚಿವೆಯಾಗಿ ಬಡವರ, ಹಿಂದುಳಿದವರ ಸಬಲೀಕರಣಕ್ಕಾಗಿ ಶ್ರಮಿಸಿದವರು.
ರಾಜಸ್ಥಾನ ಅಭಿವೃದ್ಧಿಗಾಗಿ ಪ್ರಯತ್ನಿಸಿದವರು. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
PublicNext
30/11/2020 10:51 am