ಬೆಂಗಳೂರು:ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ಪಿ.ರವೀಂದ್ರನಾಥ್ ತಮ್ಮ ಸೇವೆಗೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿ ಪೂರ್ವದಲ್ಲೇ ತಮ್ಮನ್ನು ವರ್ಗಾವಣೆ ಮಾಡಿದ್ದರಿಂದ ಬೇಸರಗೊಂಡಿದ್ದ ಪಿ. ರವೀಂದ್ರನಾಥ್, ಮುಖ್ಯ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.
ರವೀಂದ್ರನಾಥ್ ಅವ್ರು ರಾಜೀನಾಮೆ ಪತ್ರದಲ್ಲಿ ಹೀಗೆ ಬರೆದಿದ್ದಾರೆ. "ನನ್ನನ್ನು ಸುಖಾಸುಮ್ಮನೆ ವರ್ಗಾವಣೆ ಮಾಡಲಾಗಿದೆ. ಕೇವಲ ನನಗೆ ಕಿರುಕುಳವನ್ನು ನೀಡುವ ಉದ್ದೇಶದಿಂದಾಗಿ ವರ್ಗಾವಣೆಯನ್ನು ಮಾಡಲಾಗಿದೆ" ಇಲಾಖೆಯಲ್ಲಿ ವೈಯಕ್ತಿವಾಗಿ ಟಾರ್ಗೆಟ್ ಮಾಡ್ತಿದ್ದಾರೆಂದು ಕೂಡ ಆರೋಪಿಸಿದ್ದಾರೆ.
1989 ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಪಿ.ರವೀಂದ್ರನಾಥ್, ಡಿಜಿಪಿ, ಡೈರೆಕ್ಟರೇಟ್ ಸಿವಿಲ್ ರೈಟ್ಸ್ ಎನ್ಫೋರ್ಸ್ ಮೆಂಟ್ ನಲ್ಲಿದ್ದ ವೇಳೆ ನಿವೃತ್ತ ಐಪಿಎಸ್ ಅಧಿಕಾರಿಯಾದ ಕೆಂಪಯ್ಯರವರಿಗೆ ನೊಟೀಸ್ ನೀಡಿದ್ದರು. ನಕಲಿ ಜಾತಿ ಸರ್ಟಿಫಿಕೇಟ್ ಗೆ ಸಂಬಂಧಿಸಿದಂತೆ ನೊಟೀಸ್ ನೀಡಿದ್ದರು. ಇದ್ರ ಜೊತೆಗೆ ಎಂಪಿ ರೇಣುಕಾಚಾರ್ಯ ಮಗಳು ಹಾಗೂ ಮಹಂತೇಶ್ ಕವಟಗಿಮಠ್ ಕುಟುಂಬಸ್ಥರು ಎಸ್.ಸಿ. ಸರ್ಟಿಫಿಕೇಟ್ ಪಡೆದ ಪ್ರಕರಣ ಸಂಬಂಧಿಸಿದ ಕೂಡ ಕೇಸ್ ದಾಖಲಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ರು.
ಮತ್ತು ಪಶ್ಚಿಮ ಘಟ್ಟದಲ್ಲಿ ಮಾಲೇರು ಬ್ರಾಹ್ಮಣರು ಎಸ್.ಸಿ. ಸರ್ಟಿಫಿಕೇಟ್ ಪಡೆದುಕೊಂಡಿದ್ರು ಇವರ ವಿರುದ್ಧವೂ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ ರವೀಂದ್ರನಾಥ್ ಈ ಮೂರು ಕಾರಣಗಳೇ ರವೀಂದ್ರನಾಥ್ ವರ್ಗಾವಣೆಗೆ ಕಾರಣವಾಯ್ತಾ.?
ಪ್ರಭಾವ ಬೀರಿ ರವೀಂದ್ರನಾಥ್ ವರ್ಗಾವಣೆ ಮಾಡಿಸಿದ್ರಾ..? ಎನ್ನುವ ಅನುಮಾನ ಮೂಡಿದೆ.
ಇದಾದ ಕೆಲವೇ ದಿನಗಳಲ್ಲಿ ಪಿ ರವೀಂದ್ರನಾಥ್ ರವರನ್ನು ಡಿಜಿಪಿ , ತರಬೇತಿಗೆ ವರ್ಗಾವಣೆಯನ್ನು ಮಾಡಲಾಗಿತ್ತು.ಇದ್ರಿಂದ ಬೇಸತ್ತಿದ್ದ ರವೀಂದ್ರನಾಥ್, ಈಗ ತಮ್ಮ ಸೇವೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರವೀಂದ್ರನಾಥ್ 2008,2014,2020ರಲ್ಲಿಯೂ ಐಪಿಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಕೆಲವು ಹಿತೈಷಿಗಳು ಮನವೊಲಿಸಿ ಬಳಿಕ ರಾಜೀನಾಮೆಯನ್ನು ವಾಪಸ್ ಪಡೆದಿದ್ದರು. ಇದೀಗ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
PublicNext
10/05/2022 07:00 pm