ನವದೆಹಲಿ : ಆರು ರಾಜ್ಯಗಳಿಂದ ರಾಜ್ಯಸಭೆಯ 13 ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. ಈ ಕುರಿತು ಇಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದೆ. ಪಂಜಾಬ್ ನಲ್ಲಿ 5 ಸ್ಥಾನಗಳು, ಕೇರಳದಲ್ಲಿ 3, ಅಸ್ಸಾಂನಲ್ಲಿ 2, ಹಿಮಾಚಲ ಪ್ರದೇಶ, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಿಂದ ತಲಾ ಒಂದು ಸ್ಥಾನ ಖಾಲಿ ಉಳಿದಿವೆ.
ರಾಜ್ಯಸಭೆಯ ಸ್ಥಾನಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120 ಶಾಸಕರು ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡುತ್ತಾರೆ.
PublicNext
07/03/2022 07:33 pm