ಬಹುತೇಕ ಐಟಿ ಕಂಪನಿ, ಕೆಲವು ಖಾಸಗಿ ಕಂಪನಿಗಳಲ್ಲಿ ವಾರಕ್ಕೆ 5 ದಿನ ಮಾತ್ರ ಕೆಲಸವಿರುತ್ತದೆ. ಉಳಿದಂತೆ ಶನಿವಾರ ಮತ್ತು ಭಾನುವಾರ ವೀಕೆಂಡ್ ರಜೆ ಸಿಗುತ್ತದೆ. ಆದರೆ ಸರ್ಕಾರಿ ನೌಕರರಿಗೆ ವಾರದಲ್ಲಿ ಭಾನುವಾರ ಮಾತ್ರ ರಜೆ ಇರುತ್ತದೆ. ಇದೀಗ ಛತ್ತೀಸ್ಗಢ ಸರ್ಕಾರವು ತನ್ನ ಸಿಬ್ಬಂದಿಗೆ ದೊಡ್ಡ ರಿಲೀಫ್ ನೀಡಿದ್ದು, ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ ಮಾಡಲು ಅವಕಾಶ ನೀಡಿದೆ.
ಭಾರತದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇತರ ಪ್ರಮುಖ ಘೋಷಣೆಗಳನ್ನು ಕೂಡ ಮಾಡಿದ್ದಾರೆ. ಅಂಶದಾಯಿ ಪಿಂಚಣಿ ಯೋಜನೆಯ ಭಾಗವಾಗಿ ಪಿಂಚಣಿಗಾಗಿ ರಾಜ್ಯದ ಮೊತ್ತವನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸುವುದಾಗಿ ಛತ್ತೀಸ್ಗಢ ಸರ್ಕಾರ ತಿಳಿಸಿದೆ.
PublicNext
26/01/2022 04:02 pm