ನವದೆಹಲಿ: ಕೇಂದ್ರ ಸರ್ಕಾರ ಖಾಸಗಿ ಕ್ರಿಪ್ಟೋ ಕರೆನ್ಸಿಯನ್ನ ಸಂಪೂರ್ಣ ಬ್ಯಾನ್ ಮಾಡಲು ನಿರ್ಧರಿಸಿದ್ದು, ಇದೇ 29 ರಂದು ಆರಂಭಗೊಳ್ಳಿರೋ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನೂ ಮಂಡಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
ಕ್ರಿಪ್ಟೋ ಕರೆನ್ಸಿ ಸೇರಿ ಕೇಂದ್ರ ಸರ್ಕಾರ ಒಟ್ಟು 29 ಮಸೂದೆಯನ್ನ ಮಂಡಿಸಲಿದೆ.ಇದರಲ್ಲಿ 26 ನೂತನ ಮಸೂದೆಗಳಾಗಿವೆ ಎಂದು ವರದಿಯಾಗಿದೆ.
ನವೆಂಬರ್-29 ರಂದು ಆರಂಭಗೊಳ್ಳಿರೋ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಮಸೂದೆ ರದ್ದು ಕೂಡ ಸೇರಿದ್ದು ರೈತರು ವಿರೋಧಿಸುತ್ತಿರೋ ವಿದ್ಯುಚ್ಚಕ್ತಿ ತಿದ್ದುಪಡಿ ಮಸೂದೆನೂ ಚರ್ಚೆಗೆ ಬರಲಿದೆ.
PublicNext
23/11/2021 10:58 pm