ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಹಾನಗಲ್ ಉಪಚುನಾವಣೆಯ ಮತ ಎಣಿಕೆ ಪ್ರಾರಂಭ

ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಹಾವೇರಿಯ ದೇವಗಿರಿ ಗ್ರಾಮದ ಬಳಿ ಇರುವ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮತ ಎಣಿಕೆ ನಡೆಯುತ್ತಿದೆ.

ಮತ ಎಣಿಕೆಗೆ ಜಿಲ್ಲಾಡಳಿತವು ಸಕಲ ಸಿದ್ದತೆ ಮಾಡಿಕೊಂಡಿದೆ. ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸರು ಮತ ಎಣಿಕೆ ಸುತ್ತಲೂ ಬಿಗಿ ಭದ್ರತೆ ಒದಗಿಸಿದ್ದಾರೆ. ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗೂ ಓರ್ವ ಎಸ್ಪಿ, ಓರ್ವ ಎಎಸ್ಪಿ ಸೇರಿದಂತೆ 250 ಜನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಇನ್ನು ಮತ ಎಣಿಕೆಗೆ ಮೂರು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಎರಡು ಕೊಠಡಿಯಲ್ಲಿ ಇವಿಎಮ್ ಮತ ಎಣಿಕೆಗೆ ಒಟ್ಟು 14 ಟೇಬಲ್. ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ಪ್ರತ್ಯೇಕ ಕೊಠಡಿ ಒದಗಿಸಲಾಗಿದೆ. ಒಂದು ಟೇಬಲ್ ಗೆ ಒಟ್ಟು ಮೂರು ಜನ ಸಿಬ್ಬಂದಿ ನೇಮಿಸಿದ್ದು ಇದರಲ್ಲಿಒರ್ವ ಮೈಕ್ರೋ ಅಬ್ಸರ್ವರ್ , ಒರ್ವ ಎಣಿಕೆ ಮೇಲ್ವಿಚಾರಕ, ಓರ್ವ ಎಣಿಕೆ ಸಹಾಯಕ ಇದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು, ಎಣಿಕೆ ಸಿಬ್ಬಂದಿ, ಅಭ್ಯರ್ಥಿಗಳು, ಎಣಿಕೆ ಕೇಂದ್ರದ ಏಜಂಟರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಿಗ್ಗೆ 7:30ಕ್ಕೆ ಅಧಿಕಾರಿಗಳು ಸ್ಟ್ರಾಂಗ್ ರೂಂ ತೆರೆದು ಇವಿಎಂ ಗಳನ್ನು ಹೊರತೆಗೆದಿದ್ದಾರೆ. ಒಟ್ಟು 19 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಕ್ಷೇತ್ರದ ಬಗ್ಗೆ ಮಾಹಿತಿ...

ಹಾನಗಲ್ ಕ್ಷೇತ್ರದಲ್ಲಿ ಒಟ್ಟು 204481 ಮತದಾರರಿದ್ದಾರೆ.

ಮಹಿಳಾ ಮತದಾರರು 98953

ಪುರುಷ ಮತದಾರರು 105525

ಮತ ಚಲಾಯಿಸಿದ ಒಟ್ಟು ಮತದಾರರು 171264 (ಶೇ83.76)

ಮತ ಚಲಾಯಿಸಿದ ಮಹಿಳಾ ಮತದಾರರು 82281

ಮತ ಚಲಾಯಿಸಿದ ಪುರುಷ ಮತದಾರರು 88981

ಅಂಚೆ ಮತದಾರರು 463

ಸೇವಾ ಮತದಾರರು 83

Edited By : Nagaraj Tulugeri
PublicNext

PublicNext

02/11/2021 07:51 am

Cinque Terre

90.27 K

Cinque Terre

0

ಸಂಬಂಧಿತ ಸುದ್ದಿ