ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋನು ಸೂದ್​ಗೆ ಸಂಕಷ್ಟ : ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಸರ್ವೇ

ಮುಂಬೈ: ಬಾಲಿವುಡ್ ನಟ ಸೋನು ಸೂದ್‌ಗೆ ಸಂಬಂಧಿಸಿದ ಆರು ಸ್ಥಳಗಳನ್ನು ಆದಾಯ ತೆರಿಗೆ ಇಲಾಖೆ ಸರ್ವೇ ಮಾಡಿದೆ ಎಂದು ವರದಿಯಾಗಿದೆ.

ಸೋನು ಸೂದ್ ಅವರ ಮುಂಬೈ ನಿವಾಸಕ್ಕೆ ಐಟಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಟ ಸೋನು ಸೂದ್​ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರನ್ನು ಅಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರಾಂಡ್​ ಅಂಬಾಸಿಡರ್​ ಆಗಿ ಆಯ್ಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಐಟಿ ಅಧಿಕಾರಿಗಳು ಸರ್ವೇ ನಡೆಸಿದ್ದು, ಇದರಿಂದ ಅವರ ಸಾವಿರಾರು ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

ಬಹುಭಾಷಾ ನಟ ಸೋನು ಸೂದ್​ಗೆ ಸೇರಿರುವ ಆರು ಸ್ಥಳಗಳಲ್ಲಿ ಐಟಿ ಇಲಾಖೆ ಸರ್ವೇ ನಡೆಸಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಟನಿಂದ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Edited By : Vijay Kumar
PublicNext

PublicNext

15/09/2021 07:10 pm

Cinque Terre

82.56 K

Cinque Terre

17

ಸಂಬಂಧಿತ ಸುದ್ದಿ