ನವ ದೆಹಲಿ : ಕೊರೊನಾದಿಂದ ಕಂಗಾಲಾದ ಜನರಿಗೆ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೇಂದ್ರದ ಈ ನಡೆಯಿಂದ ಜನಸಾಮಾನ್ಯರ ಬದುಕು ಅಕ್ಷರ ಸಹ ಚಿಂತಾಜನಕವಾಗಿದೆ. ತೈಲ ಬೆಲೆ ಏರಿಕೆಯಿಂದ ಕಂಗಾಲಾದ ಜನ ಉಪವಾಸ ಮಲಗಿಕೊಳ್ಳುವ ಸಂದರ್ಭವನ್ನು ಕೇಂದ್ರ ಹುಟ್ಟುಹಾಕುತ್ತಿದೆ ಎಂದು ಜನಸಾಮಾನ್ಯರು ಗರಂ ಆಗಿದ್ದಾರೆ.
ಹೌದು ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ಬೆನ್ನಲ್ಲೆ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಇಂದು(ಮಾ.1, ಸೋಮವಾರ) ಮತ್ತೆ 25 ರೂ. ನಷ್ಟು ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಎಲ್ ಪಿ ಜಿ ಯ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ (14. 2 ಕೆಜಿ) ದರವನ್ನು 819ರೂ. ಗೆ ನಿಗದಿಪಡೊಸಲಾಗಿದೆ.
ದೇಶದಲ್ಲಿ ನಿರಂತರವಾಗಿ ಅಡುಗೆ ಅನಿಲ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಎಲ್ ಪಿ ಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ವ್ಯವಹಾರಗಳನ್ನು ಬಂದ್ ಮಾಡಿ, ಒಲೆ ಹೊತ್ತಿಸಿ, ಜುಮಲೆ(ಒಂದು ಬಗೆಯ ತಿನಿಸು) ತಿನ್ನಿರಿ… ಇವುಗಳು ಮೋದಿ ಸರ್ಕಾರ ಜನರಿಗೆ ನೀಡುವ ಆಯ್ಕೆಗಳು” ಎಂದು ಬರೆದುಕೊಳ್ಳುವ ಮೂಲಕ ಮತ್ತೆ ಕೇಂದ್ರ ಸರ್ಕಾರವನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟೀಕೆ ಮಾಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಎಲ್ ಪಿ ಜಿ ದರ ಮೂರು ಬಾರಿ ಹೆಚ್ಚಳವಾಗಿದೆ.
PublicNext
01/03/2021 05:09 pm