ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಸುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ''ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹದಲ್ಲಿ ಬಹಳ ಜಾಗರೂಕವಾಗಿದೆ. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿವೃದ್ಧಿ ಬದ್ಧತೆ ಇದೆ. ಈ ಕಾರಣಕ್ಕೆ ಈ ಮಾರ್ಗದಿಂದ ಕೆಲವು ಸಂಪನ್ಮೂಲಗಳು ಬೇಕಾಗುತ್ತದೆ. ಪೆಟ್ರೋಲಿಯಂ ಬೆಲೆ ತೆರಿಗೆ ಸಂಗ್ರಹವು ಗಣನೀಯ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ಸಂಗ್ರಹವಾಗುತ್ತದೆ'' ಎಂದು ಹೇಳಿದರು.
ಕಳೆದ 300 ದಿನಗಳ ಪೈಕಿ 60 ದಿನಗಳ ಕಾಲ ಬೆಲೆ ಏರಿಕೆಯಾಗಿದೆ. ಅಂದ್ರೆ 250 ದಿನಗಳ ಕಾಲ ನಾವು ಬೆಲೆಯನ್ನು ಏರಿಕೆ ಮಾಡಿಲ್ಲ, ಇಳಿಕೆಯನ್ನೂ ಮಾಡಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಏರಿಕೆ ಮತ್ತು ಇಳಿಕೆ ಆಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಮೂಲಕ ಸರ್ಕಾರಕ್ಕೆ ಸಂಪನ್ಮೂಲ ಬರುತ್ತದೆ. ಸಂಗ್ರಹಗೊಂಡ ತೆರಿಗೆಯನ್ನು ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
PublicNext
10/02/2021 05:02 pm