ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶೇಷ ಪೂಜೆ ಸಲ್ಲಿಸಿ ನವೀಕೃತ ಉಜ್ಜಯಿನಿ ದೇಗುಲ ಕಾರಿಡಾರ್ ಉದ್ಘಾಟಿಸಿದ ಮೋದಿ

ಮಧ್ಯಪ್ರದೇಶ: ಭಾರತ ಗತವೈಭವ ಮತ್ತೆ ಮರುಕಳಿಸುತ್ತಿದೆ. ಹಿಂದೂ ದೇವಸ್ಥಾನಗಳು ಅದೇ ಹಳೆ ಗತವೈಭವದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ ಹಂತದಲ್ಲಿದ್ದರೆ, 6000 ವರ್ಷಗಳ ಹಿಂದಿನ ಇತಿಹಾಸವಿರುವ ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಈಗಾಗಲೇ ಉದ್ಘಾಟನೆಗೊಂಡಿದೆ.

ಇದೀಗ ಮಧ್ಯ ಪ್ರದೇಶದ ಮಹಾಕಾಲೇಶ್ವರ ದೇವಾಲಯದ ಕಾರಿಡಾರ್‌ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಮೊದಲ ಹಂತದ ಕಾರಿಡಾರ್ ಯೋಜನೆಯನ್ನು 856 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಲೇಶ್ವರ ದೇಗುಲ ಸನತಾನ ಧರ್ಮ ಹಾಗೂ ಭಕ್ತಿಯ ಕೇಂದ್ರದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ.

ಮೋದಿ ಈ ಐತಿಹಾಸಿಕ ಮಹಾಕಾಲ ಕಾರಿಡಾರ್ ಉದ್ಘಾಟಿಸಿದ್ದಾರೆ. ಬೃಹತ್ ಆಕಾರದ ಶಿವಲಿಂಗವನ್ನು ಪವಿತ್ರ ಮೋಲಿಯಿಂದ ಸುತ್ತಿಡಲಾಗಿತ್ತು. ಈ ಶಿವಲಿಂಗ ಅನಾವರಣಗೊಳಿಸಿದ ಮೋದಿ ಕಾರಿಡಾರ್ ಉದ್ಘಾಟಿಸಿದರು. ಈ ವೇಳೆ ಮಂತ್ರಘೋಷಗಳು ಮೊಳಗಿತು. ಬಳಿಕ ಮೋದಿ ಸಂಪೂರ್ಣ ಕಾರಿಡಾರ್ ವೀಕ್ಷಿಸಿದರು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಕಾರಿಡಾರ್ ಮಾಹಿತಿ ನೀಡಿದರು.

ಈವರೆಗೆ ಮಹಾಕಾಲ ದೇಗುಲದ ಸುತ್ತ ಇಕ್ಕಟ್ಟಾದ ಜಾಗವಿತ್ತು. ಇದನ್ನು ತೆರವುಗೊಳಿಸಿ ವಿಶಾಲವಾದ ಕಾರಿಡಾರ್‌ ನಿರ್ಮಿಸಲಾಗಿದೆ. ಇದರಿಂದ ಭಕ್ತರಿಗೆ ಆರಾಮವಾಗಿ ದೇಗುಲಕ್ಕೆ ಸಾಗಿಬರಲು ಅನುಕೂಲವಾಗಲಿದೆ. ಇದು ಸುಮಾರು 900 ಮೀ. ಉದ್ದದ ಕಾರಿಡಾರ್‌ ಆಗಿದ್ದು, ದೇಶದ ಅತಿದೊಡ್ಡ ಕಾರಿಡಾರ್‌ಗಳಲ್ಲಿ ಒಂದಾಗಿದೆ.

ಇದು 2 ಪ್ರಮುಖ ಗೇಟ್‌ವೇ- ನಂದಿದ್ವಾರ ಹಾಗೂ ಪಿನಾಕಿ ದ್ವಾರವನ್ನು ಒಳಗೊಂಡಿದೆ. ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸವಿರುವ ಹಾಗೂ ಶಿವನ ಮುದ್ರೆಗಳಿರುವ 108 ಅಲಂಕೃತ ಮರಳುಗಲ್ಲುಗಳ ಸ್ತಂಭಗಳಿಂದ ಕಾರಿಡಾರ್‌ ಅನ್ನು ಅಲಂಕರಿಸಲಾಗಿದೆ. ಇದು ದೇವತೆಗಳ ಕಲಾತ್ಮಕ ಶಿಲ್ಪ ಹಾಗೂ ಪ್ರಕಾಶಿತ ಭಿತ್ತಿಚಿತ್ರಗಳಿಂದ ಆವೃತವಾದ ಕಾರಂಜಿಯನ್ನು ಒಳಗೊಂಡಿದೆ. ಕಾಶಿ ಕಾರಿಡಾರ್‌ ಮಾದರಿಯಲ್ಲೇ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸಲು ಇದನ್ನು ನಿರ್ಮಿಸಲಾಗಿದೆ.

Edited By : Abhishek Kamoji
PublicNext

PublicNext

11/10/2022 07:31 pm

Cinque Terre

47.78 K

Cinque Terre

6

ಸಂಬಂಧಿತ ಸುದ್ದಿ