ಮುಂಬೈ: ಬಾಲಿವುಡ್ ನ ಎಮರ್ಜನ್ಸಿ ಚಿತ್ರದಲ್ಲಿ ನಟ ಶ್ರೇಯಸ್ ತಲ್ಪಾಡೆ ಈಗ ಒಂದು ವಿಶೇಷ ರೋಲ್ ನಿಭಾಯಿಸುತ್ತಿದ್ದಾರೆ. ಹೌದು. ಇದು ಅಟಲ್ ಬಿಹಾರಿ ವಾಜಪೇಯಿ ಪಾತ್ರ ಅನ್ನೋದೇ ವಿಶೇಷ. ಈ ಪಾತ್ರದ ಫಸ್ಟ್ ಲುಕ್ ಕೂಡ ಹೊರ ಬಿದ್ದಿದೆ.
ಎಮರ್ಜನ್ಸಿ ಚಿತ್ರ ಇಂಧಿರಾ ಗಾಂಧಿ ರಾಜಕೀಯ ಜೀವನದ ಸುತ್ತವೇ ಇದೆ. ಇಂಧಿರಾ ಗಾಂಧಿ ಪಾತ್ರವನ್ನ ನಟಿ ಕಂಗನಾ ರಾಣಾವುತ್ ನಿಭಾಯಿಸುತ್ತಿದ್ದಾರೆ. ಅನುಪಮ್ ಖೇರ್ ಅವ್ರು ಜಯಪ್ರಕಾಶ್ ನಾರಾಯಣ ಅವ್ರ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.
ಸ್ವತಃ ಕಂಗನಾ ರಾಣಾವುತ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಒಂದೊಂದೇ ಪಾತ್ರದ ಫಸ್ಟ್ ಲುಕ್ ಈಗ ರಿವೀಲ್ ಆಗುತ್ತಿವೆ. ಇತ್ತೀಚಿಗೆ ಕಂಗನಾ ನಿರ್ವಹಿಸಿರೋ ಇಂಧಿರಾ ಗಾಂಧಿ ಪಾತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿತ್ತು.
PublicNext
29/07/2022 08:12 am