ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸಚಿವ ಭಗವಂತ್ ಖೂಬಾರನ್ನ ಗೊಬ್ಬರ ಕೇಳಿದ ಮಾಸ್ತರ ಸಸ್ಪೆಂಡ್ !

ಬೀದರ್: ಕೇಂದ್ರ ಸಚಿವ ಭಗವಂತ್ ಖೂಬಾರಿಗೆ ಕರೆ ಮಾಡಿ ಗೊಬ್ಬರ ಕೇಳಿದ್ದ ಶಿಕ್ಷಕನನ್ನ ಈಗ ಅಮಾನತ್ತು ಮಾಡಲಾಗಿದೆ.

ಹೌದು. ಇತ್ತೀಚಿಗೆ ಬೀದರ್‌ನ ಶಿಕ್ಷಕರೊಬ್ಬರು ಕೇಂದ್ರ ಸಚಿವ ಭಗವಂತ್ ಖೂಬಾರಿಗೆ ಕರೆ ಮಾಡಿದ್ದರು. ನಮ್ಮೂರಲ್ಲಿ ಗೊಬ್ಬರ ಸಿಗುತ್ತಿಲ್ಲ ಅಂತಲೂ ಕೇಳಿದ್ದರು. ಆಗಲೇ ಈ ವಿಚಾರದಲ್ಲಿ ಫೋನ್‌ನಲ್ಲಿಯೇ ವಾಗ್ವಾದವೂ ನಡೆದು ಹೋಗಿತ್ತು.

ಸಚಿವ ಭಗವಂತ್ ಖೂಬಾ ಒತ್ತಡೆದ ಮೇರೆಗೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ, ಹೆಡಪುರ ಗ್ರಾಮದ ಶಿಕ್ಷಕ ಕುಶಾಲ್ ಪಾಟೀಲ್ ರನ್ನ ಸಸ್ಪೆಂಡ್ ಮಾಡಿ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಗವಂತ್ ಖೂಬಾ ಮತ್ತು ಶಿಕ್ಷಕ ಕುಶಾಲ್ ಅವರ ಮಾತಿನ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಕೂಡ ಮಾಡಿತ್ತು.

Edited By :
PublicNext

PublicNext

23/06/2022 05:48 pm

Cinque Terre

44.9 K

Cinque Terre

10

ಸಂಬಂಧಿತ ಸುದ್ದಿ