ದಾವಣಗೆರೆ: ರಾಜ್ಯದ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಜೆಎನ್‌ಯು ಪತ್ರ ಬರೆದಿದೆ. ಇದಕ್ಕೆ ಸಂಬಂಧಿಸಿದಂತೆ ಫ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೊಂಚ ಖಾರವಾಗಿಯೇ ರಿಯಾಕ್ಟ್ ಮಾಡಿದ್ದಾರೆ.
ಜೆಎನ್‌ಯುನವರು ಭಾರತವನ್ನ ತುಕಡಾ ತುಕಡಾ ಮಾಡಿ, ಪಾಕಿಸ್ತಾನದ ಧ್ವಜ ಹಾರಿಸಿದರು. ಇದೇ ಕಾರಣಕ್ಕೇನೆ ಅವರು ರಾಜ್ಯದ ಪಠ್ಯದ ಬಗ್ಗೆ ಈಗ ಪ್ರತಿಕ್ರಿಯೇ ನೀಡುತ್ತಿದ್ದಾರೆ.
ನಮ್ಮ ರಾಜ್ಯದ ಬರಗೂರು ಸಮಿತಿ ಈ ತುಕಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ಮಾಡಿದೆ.ಪಠ್ಯ ಪುಸ್ತಕ ಸಮಿತಿಯಲ್ಲಿ ಜೆಎನ್‌ಯು ಪ್ರಾಧಾಪಕ ಇದ್ದರು. ಭಾರತವನ್ನ ಒಡೆಯುವ ಹಿಂದೂ ಸಮಾಜವನ್ನ ಒಡೆಯುವ ದೊಡ್ಡ ಗ್ಯಾಂಗ್ ಜೆಎನ್‌ಯು ನಲ್ಲಿಯೇ ಇದೆ ಎಂದು ಸಚಿವ ನಾಗೇಶ್ ದೂರಿದರು.
PublicNext
15/06/2022 08:24 am