ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಪಠ್ಯ ಪರಿಷ್ಕರಣೆ ದಂಗಲ್ ಚರ್ಚೆ

ವರದಿ-ಗಣೇಶ್ ಹೆಗಡೆ

ಬೆಂಗಳೂರು- ರಾಜ್ಯದ ಪಠ್ಯ ಪುಸ್ತಕ ವಿವಾದಕ್ಕೆ ಜೆಎನ್‌ಯು ಎಂಟ್ರಿ ಕೊಟ್ಟಿದೆ. ಈ ಮೂಲಕ ರಾಷ್ಟ್ರ ಮಟ್ಟಕ್ಕೆ ರಾಜ್ಯದ ಪಠ್ಯ ಪರಿಷ್ಕರಣೆ ದಂಗಲ್ ಸದ್ದು ಮಾಡುತ್ತಿದೆ. ತಿರುಚಿದ ಇತಿಹಾಸ ಮಕ್ಕಳಿಗೆ ಕಲಿಸಿಕೊಡಬೇಡಿ ಎಂದು ಜೆಎನ್‌ಯು ಇತಿಹಾಸ ತಜ್ಞರು ರಾಜ್ಯದ ವಿದ್ಯಾರ್ಥಿಗಳ ಸಂಘಟನೆಗೆ ಪತ್ರ ಬರೆದಿದ್ದಾರೆ.

ವಿದ್ಯಾರ್ಥಿ ಸಂಘಟನೆಗೆ ಜೆಎನ್‌ಯು ಇತಿಹಾಸ ತಜ್ಞರಾದ ರೋಮಿಳಾ ಥಾಪರ್, ಪ್ರೊ ಆದಿತ್ಯ ಮುಖರ್ಜಿ ರವರು ಒಳ್ಳೆಯ ಶಿಕ್ಷಣ‌ ಅಡಿಪಾಯ.‌ ಇತಿಹಾಸ ಪಠ್ಯದಲ್ಲಿ ಏನೆಲ್ಲ ಇರಬೇಕು ಎಂಬುದನ್ನು ಖ್ಯಾತ ಇತಿಹಾಸಕಾರರು ನಿರ್ಧರಿಸಬೇಕು. ಇದಕ್ಕೆಲ್ಲ ರಾಜಕಾರಣಿಗಳು , ಅಧಿಕಾರಿಗಳು ನಿರ್ಧರಿಸಬಾರದು, ಸಾರ್ವಜನಿಕರ ಅಥವಾ ರಾಜಕಾರಣಿಗಳ ಪ್ರೊಪಗಂಡಾ ಮೇಲೆ ಪಠ್ಯ ರಚಿಸಲು ಸಾಧ್ಯವಿಲ್ಲ ಎಂಬಿತ್ಯಾದಿ ವಿವರಗಳನ್ನು ಪತ್ರದಲ್ಲಿ ನೀಡಿದ್ದಾರೆ.

ಇನ್ನೂ ರಾಜ್ಯ ಪಠ್ಯ ಪರಿಷ್ಕರಣೆ ನೋಡಿ ನಮಗೆ ಗಾಬರಿ ಆಗಿದ್ದು, ಹೊಸ ವಿಚಾರ ತುರುಕುವ ಬರದಲ್ಲಿ ದೇಶದ ಜಾತ್ಯಾತೀತ ಮನೋ ಭಾವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ದೂರಿದ್ದಾರೆ.

Edited By : Nagaraj Tulugeri
PublicNext

PublicNext

14/06/2022 06:12 pm

Cinque Terre

63.6 K

Cinque Terre

0

ಸಂಬಂಧಿತ ಸುದ್ದಿ