ಕಾಬೂಲ್(ಅಪ್ಘಾನಿಸ್ತಾನ): ತಾಲಿಬಾನ್ ಸರ್ಕಾರ ರಚನೆಯಾಗಿದೆ. ಮಂತ್ರಿ ಮಂಡಲದ ಬಹುತೇ ಖಾತೆಗಳೂ ಹಂಚಿಕೆಯಾಗಿವೆ. ಈ ನಡುವೆ ಅಲ್ಲಿನ ಶಿಕ್ಷಣ ಸಚಿವನ ಹೇಳಿಕೆಯೊಂದು ವೈರಲ್ ಆಗುತ್ತಿದೆ. ನಾವೆಲ್ಲ ಏನನ್ನೂ ಓದದೇ ಸಾಧನೆ ಮಾಡಿದ್ದೇವೆ. ಯಾವುದೇ ಡಿಗ್ರಿ, ಪಿಎಚ್‌ಡಿ ಇವೆಲ್ಲ ಜನರಿಗೆ ಅನಗತ್ಯ ಎಂದಿದ್ದಾನೆ.
ಹೌದು..ಅಫ್ಘಾನಿಸ್ತಾನದ ನೂತನ ಶಿಕ್ಷಣ ಸಚಿವರಾಗಿರುವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್ ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿ, ಇದೀಗ ತಾಲಿಬಾನ್ ಸರ್ಕಾರ ಬಂದಿದೆ. ತಾಲಿಬಾನಿಗಳಲ್ಲಿ ಪ್ರಧಾನಿ ಹುದ್ದೆಗೆ ಏರುತ್ತಿರುವ ಮುಲ್ಲಾರಿಂದ ಹಿಡಿದು ಯಾರೂ ಯಾವುದೇ ಪದವಿ ಪಡೆದವರಲ್ಲ. ಆದರೂ ಸಾಧನೆ ಮಾಡಿದ್ದಾರೆ. ಈ ಕಾಲದಲ್ಲಿ ಯಾವುದೇ ಸ್ನಾತಕೋತ್ತರ ಪದವಿಗಳಾಗಲಿ, ಪಿಎಚ್ಡಿಯಾಗಲೀ ಅಗತ್ಯವಿಲ್ಲ. ಅದಕ್ಕೆಲ್ಲ ಬೆಲೆಯೂ ಇಲ್ಲ. ತಾಲಿಬಾನ್ ಸರ್ಕಾರ ಅಧಿಕೃತವಾಗಿ ರಚನೆಯಾಗುವುದೊಂದೇ ಬಾಕಿ ಇದೆ. ಅದಾದ ಕೂಡಲೇ ಹಲವು ಬದಲಾವಣೆಗಳು ಆಗಲಿವೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಶಾಲಾ-ಕಾಲೇಜುಗಳಲ್ಲಿ ಹುಡುಗರು-ಹುಡುಗಿಯರ ಮಧ್ಯೆ ಪರದೆ ಹಾಕಲಾಗುವುದು..ಹೆಣ್ಣು ಮಕ್ಕಳಿಗೆ ವಯಸ್ಸಾದ ಪುರುಷರು ಅಥವಾ ಮಹಿಳಾ ಶಿಕ್ಷಕಿಯರು ಮಾತ್ರ ಕಲಿಸಬಹುದು ಎಂದೂ ತಿಳಿಸಿದ್ದಾರೆ.
PublicNext
08/09/2021 04:26 pm