ವಿಶೇಷ ವರದಿ - ಗಣೇಶ್ ಹೆಗಡೆ
ಬೆಂಗಳೂರು: ಸಿಬಿಐ ದಾಳಿಗೆ ಗುರಿಯಾಗಿದ್ದ ಖಾಸಗಿ ಕಾಲೇಜಿನ ಪ್ರಾಂಶುಪಾಲ ಎಸ್.ಎಂ. ಜಯಕರ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯಾಗಿ ನೇಮಕ ಮಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಉನ್ನತ ಶಿಕ್ಷಣ ಸಚಿವರ ಆಪ್ತ, ಜಯಕರ್ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ ಫೌಂಡೇಶನ್ ಟ್ರಸ್ಟಿಯೂ ಆಗಿರುವ ಜಯಕರ್ ಶೆಟ್ಟಿ ಅವರ ನೇಮಕ ಸಚಿವರ ಕೃಪಾಕಟಾಕ್ಷದಿಂದ ಆಗಿದೆ ಎಂಬ ದೂರುಗಳು ಕೇಳಿ ಬಂದಿದೆ.
4 ವರ್ಷದ ಅವಧಿಗೆ Vice Chancellor ಆಗಿ ಮುಂದುವರಿಯಲು ಅವಕಾಶ ಇದ್ದು, 2013ರಲ್ಲಿ ಡಾ.ಜಯಕರ್ ಮೇಲೆ ಸಿಬಿಐ ದಾಳಿ ಆಗಿತ್ತು. ಲಂಚ ಪಡೆದು ಡೆಂಟಲ್ ಕಾಲೇಜುಗಳಿಗೆ ಅನುಮತಿ ನೀಡಿದ ಆರೋಪ ಕೇಳಿ ಬಂದಿತ್ತು.
ಕಳಂಕಿತ, ವಿವಾದಾತ್ಮಕ ವ್ಯಕ್ತಿಗೆ ಬೆಂಗಳೂರು ವಿವಿ ಕುಲಪತಿ ಸ್ಥಾನ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಕುಲಪತಿ ಹುದ್ದೆಗೆ ಮೂರು ವಿಶ್ವವಿದ್ಯಾಲಯಗಳಲ್ಲಿ ಅರ್ಹರೇ ಇಲ್ವಾ? ಎಂಬ ಪ್ರಶ್ನೆ ಕೇಳಿ ಬರ್ತಿದೆ. ಡಾ.ಜಯಕರ್ ರವರು ಮಾರುತಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಮುಖ್ಯಸ್ಥರಾಗಿದ್ದಾರೆ.
PublicNext
29/07/2022 05:57 pm