ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಯು ಉಪನ್ಯಾಸಕರ ವರ್ಗಾವಣೆಗೆ ರಾಜ್ಯ ಸಿವಿಲ್‌ ಸೇವೆಗಳು ವಿಧೇಯಕ ಮಂಡನೆ

ಬೆಳಗಾವಿ: ಪಿಯು ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಅವಕಾಶ ಕಲ್ಪಿಸಲು ಸಿದ್ಧಪಡಿಸಲಾಗಿದ್ದ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ತಿದ್ದುಪಡಿ ವಿಧೇಯಕ) 2021’ ಅನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸದನದಲ್ಲಿ ಗುರುವಾರ ಮಂಡಿಸಿದ್ದಾರೆ.

ವಿಧೇಯಕದಲ್ಲಿ ಪ್ರಮುಖವಾಗಿ ಪ್ರತಿ ವರ್ಷ ಶೇ.10ರಷ್ಟು ಪ್ರಮಾಣ ಮೀರದಂತೆ ಪಿಯು ಉಪನ್ಯಾಸಕರ ವರ್ಗಾವಣೆ ನಡೆಸಬೇಕು. ಆರಂಭಿಕ ನೇಮಕಾತಿ ಅಥವಾ ಬಡ್ತಿಯನ್ನು ‘ಸಿ’ ವಲಯದ (ಗ್ರಾಮೀಣ ಭಾಗ) ಕಾಲೇಜುಗಳಿಗೆ ಮಾಡಬೇಕು. ಶಿಕ್ಷಕರ ವರ್ಗಾವಣೆ ಮಾದರಿಯಲ್ಲೇ ಅರ್ಜಿ ಆಹ್ವಾನಿಸಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ನಡೆಸಬೇಕು. ಸಿ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸದ ಮತ್ತು ವಲಯ ಎ ನಲ್ಲಿ ನಿರಂತರ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪ್ರತಿಯೊಬ್ಬ ಶಿಕ್ಷಕನನ್ನು ರಾಜ್ಯ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ವಲಯ ಸಿ ಅಥವಾ ಬಿಗೆ ವರ್ಗಾವಣೆ ಮಾಡಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ವಿಧೇಯಕಕ್ಕೆ ಉಭಯ ಸದನಗಳು ಅನುಮೋದನೆ ನೀಡಿದ ನಂತರ ಅಧಿಕೃತವಾಗಿ ಜಾರಿಯಾಗಲಿದೆ. ಇದರಿಂದ ರಾಜ್ಯದ 1200ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳ 12 ಸಾವಿರಕ್ಕೂ ಹೆಚ್ಚು ಉಪನ್ಯಾಸಕರಿಗೆ ಪಿಯು ಇಲಾಖಾ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗಲಿದೆ.

Edited By : Nagaraj Tulugeri
PublicNext

PublicNext

17/12/2021 04:28 pm

Cinque Terre

31.89 K

Cinque Terre

0

ಸಂಬಂಧಿತ ಸುದ್ದಿ