ನವದೆಹಲಿ: ಕೊರೊನಾತಂಕದ ನಡುವೆಯೂ ದೇಶದಲ್ಲಿ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಸದ್ಯ ರಾಷ್ಟ್ರದ ಜನರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
‘ಕೋವಿಡ್ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜನ ಹಬ್ಬ ಆಚರಿಸಬೇಕು‘ ಎಂದು ಅವರು ಕರೆ ನೀಡಿದ್ಧಾರೆ.
‘ಜ್ಞಾನ, ಸಮೃದ್ಧಿ ಹಾಗೂ ಅದೃಷ್ಟದ ಸಂಕೇತವಾದ ಗಣೇಶ ಹಬ್ಬವು ಸಂಭ್ರಮದಿಂದ ಕೂಡಿದ್ದು, ಈ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಹೋರಾಟವನ್ನು ಯಶಸ್ವಿಗೊಳಿಸಲು ಮತ್ತು ನಮ್ಮೆಲ್ಲರಿಗೂ ಸಂತೋಷ ಹಾಗೂ ಶಾಂತಿಯನ್ನು ದಯಪಾಲಿಸಲು ನಾವು ಗಣೇಶನನ್ನು ಪ್ರಾರ್ಥಿಸೋಣ‘ ಎಂದು ರಾಷ್ಟ್ರಪತಿ ಹೇಳಿದ್ದಾರೆ.
PublicNext
09/09/2021 07:28 pm