ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈ ಎಲೆಕ್ಷನ್ : ಆರ್ ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಯಿಂದ ಉರುಳು ಸೇವೆ

ಬೆಂಗಳೂರು: ರಾಜ್ಯದಲ್ಲಿ ಬೈ ಎಲೆಕ್ಷನ್ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮತಯಾಚನೆಯಲ್ಲಿ ಅಭ್ಯರ್ಥಿಗಳು ತುಸು ಹೆಚ್ಚಾಗಿಯೇ ಬ್ಯುಜಿಯಾಗಿದ್ದಾರೆ.

ಈ ನಡುವೆ ನಾಡ ಹಬ್ಬ ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಉರುಳು ಸೇವೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ವಿಜಯದಶಮಿ ದಿನದಂದು ಲೋಕ ಕಲ್ಯಾಣಕ್ಕಾಗಿ ಅವರು ಉರುಳು ಸೇವೆ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ನಿವಾರಣೆಯಾಗಲಿ, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸು ಎಂದು ದೇವರಲ್ಲಿ ಪ್ರಾರ್ಥಿಸಿದ ಕುಸುಮಾ ಅವರು ರಾಜರಾಜೇಶ್ವರಿ ದೇವಾಲಯದಲ್ಲಿ ಉರುಳು ಸೇವೆ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

26/10/2020 09:36 pm

Cinque Terre

83.97 K

Cinque Terre

2

ಸಂಬಂಧಿತ ಸುದ್ದಿ