ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಗೆ ತೆರಳುತ್ತಿದ್ದ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ.! ಇಬ್ಬರ ಬಂಧನ

ಪಾಟ್ನಾ: ಮನೆಗೆ ತೆರಳುತ್ತಿದ್ದ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆಗೈದ ಘಟನೆ ಬಿಹಾರದ ಮಾಧೇಪುರದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿಪಿನ್ ಕುಮಾರ್ ಸಿಂಗ್ (59) ಕೊಲೆಯಾದ ಬಿಜೆಪಿಯ ಸ್ಥಳೀಯ ನಾಯಕ. ಬಿಪಿನ್ ಕುಮಾರ್ ಸಿಂಗ್ ಅವರು ಶುಕ್ರವಾರ ರಾತ್ರಿ ಮನೆಗೆ ಹೊರಟಿದ್ದರು. ಬಿಹಾರದ ಮಾಧೇಪುರ ಜಿಲ್ಲೆಯ ಗುವಾಲ್ಪಾರಾ-ಶಾಹಪುರ್ ರಸ್ತೆಯ ಟಿಕ್ಕರ್ ಟೋಲೋ ತಿರುವಿನಲ್ಲಿ ಬಿಪಿನ್ ಅವರ ಕಾರಿನ ಮೇಲೆ ಹಂತಕರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಬಿಪಿನ್ ಕುಮಾರ್ ಸಿಂಗ್ ಸಾವನ್ನಪ್ಪಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಹಂತಕರಿಗೆ ಬಲೆ ಬೀಸಿದ್ದರು. ಅದರಂತೆ ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Edited By : Vijay Kumar
PublicNext

PublicNext

30/07/2022 04:36 pm

Cinque Terre

50.76 K

Cinque Terre

9

ಸಂಬಂಧಿತ ಸುದ್ದಿ