ಚಿತ್ರದುರ್ಗ: ವೀರ ಸಾರ್ವಕರ್ ಕುರಿತಂತೆ ಹಗುರವಾಗಿ ಮಾತನಾಡಿದ ಸಾಹಿತಿ ಬಿ.ಎಲ್ ವೇಣು ಕ್ಷಮೆಯಾಚಿಸಬೇಕು. ಅವರನ್ನು ಗಡಿಪಾರು ಮಾಡಬೇಕು ಎಂಬುದಾಗಿ ಒತ್ತಾಯಿಸಿ ಅವರಿಗೆ ಬೆದರಿಕೆ ಪತ್ರವೊಂದು ಬಂದಿದೆ ಎನ್ನಲಾಗಿದೆ.
ಈ ಸಂಬಂಧ ಸಾಹಿತಿ ಬಿ.ಎಲ್ ವೇಣು ಅವರ ಚಿತ್ರದುರ್ಗದ ನಿವಾಸಕ್ಕೆ ಪೋಸ್ಟ್ ಒಂದರಲ್ಲಿ ಲೆಟರ್ ಬಂದಿದ್ದು, ಆ ಪತ್ರದಲ್ಲಿ ಸಾರ್ವರ್ಕರ್ ಮತ್ತು ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದ ಯಜ್ಞ ಕುಂಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದೆ. ಅವರ ಕುರಿತಾಗಿ ನೀವು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರೋದಿಲ್ಲ. ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ.
ಇದಷ್ಟೇ ಅಲ್ಲದೇ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಸಂಬಂಧವೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ಬೆಂಬಲಿಸಿ ಪತ್ರ ಬರೆದ 61ಕ್ಕೂ ಹೆಚ್ಚು ವಿಷ ಸರ್ಪಗಳನ್ನು ಗುಂಡಿಕ್ಕಿ ಕೊಲ್ಲಬೇಕು. ಗಲ್ಲಿಗೇರಿಸಬೇಕು. ದೇಶಬಿಟ್ಟು ಓಡಿಸಬೇಕು ಎಂಬುದಾಗಿಯೂ ಹೇಳಲಾಗಿದೆ.
PublicNext
11/07/2022 10:28 am