ತುಮಕೂರು:ರಸ್ತೆ ಸರಿಮಾಡಿಸಿ ಎಂದಿದ್ದಕ್ಕೆ ಕಾಂಗ್ರೆಸ್ ಶಾಸಕರಿಂದ ಯುವಕನಿಗೆ ಕಪಾಳಮೋಕ್ಷವಾಗಿದೆ. ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪರಿಂದ ಯುವಕನಿಗೆ ಕಪಾಳಮೋಕ್ಷ ವಾಗಿದ್ದು,ಇಂದು ಬೆಳಗ್ಗೆ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಶಾಸಕರಿಂದ ಕಪಾಳಮೋಕ್ಷ ಆಗಿರೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ತಾಲೂಕಿನ ಕೀಲಾರನಳ್ಳಿ ಯುವಕನೊಬ್ಬ ನಮ್ಮೂರಿಗೆ ರಸ್ತೆ ಇಲ್ಲ. ಹದಗೆಟ್ಟೋಗಿದೆ ಸ್ವಾಮಿ, ನಮ್ಮ ಕಡೆ ಕೆಲ ನಾಯಕರು ಕಿವಿಗೊಡುತಿಲ್ಲ. ತಾವಾದರೂ ರಸ್ತೆ ಹಾಕಿಸಿ, ಸಾರಿಗೆ ಒದಗಿಸಿ ಎಂದು ತಾಲೂಕು ಕಚೇರಿ ಮುಂದೆ ಮನವಿ ಮಾಡಿದ್ದ, ಮನವಿ ಮಾಡಿದ್ದೆ ತಡ ಶಾಸಕ ಯುವಕ ಕೆನ್ನೆಗೆ ಬಾರಿಸಿ ದರ್ಪ ತೋರಿದ್ದಾರೆ.
ಶಾಸಕರನ್ನ ಪ್ರಶ್ನೆ ಮಾಡ್ಲೇ ಬಾರದ , ಪ್ರಶ್ನೆ ಮಾಡುವ ಹಕ್ಕು ಕೂಡ ಮತದಾರರಿಗೆ ಇಲ್ವಾ? ಓಟು ಪಡೆಯೋವಾಗ ಕೈಕಾಲಿಗೆ ಬೀಳೋ ಶಾಸಕರು, ಗ್ರಾಮಕ್ಕೆ ರಸ್ತೆ ಕೇಳದ್ದನ್ನೆ ದೊಡ್ಡು ತಪ್ಪು ಎಂಬಂತೆ ಹಲ್ಲೆ ನಡೆಸಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ.
PublicNext
20/04/2022 07:19 pm