ರಾಮನಗರ: ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೇಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಘಾಟು ಜೋರಾಗಿ ಅಡರುತ್ತಿದೆ. ಈ ಹಿನ್ನೆಲೆಯಲ್ಲಿ ಗರಂ ಆದ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಬಳಿ ದೂರಲು ಬಂದ ಜನರ ಮುಂದೆ ಎಸ್.ಪಿ ಸಂತೋಷ್ ಬಾಬು ಅವರಿಗೆ ಕರೆ ಮಾಡಿ ಹರಿಹಾಯ್ದಿದ್ದಾರೆ.
ಇವತ್ತು ಮದ್ಯದ ಬಾಟೆಲ್ ಮಾರಾಟ ಮಾಡ್ತಿರುವ ಎಲ್ಲಾ ಅಂಗಡಿಗಳನ್ನ ರೇಡ್ ಮಾಡ್ತೀರಾ. ನಿಮ್ಮ ಇಲಾಖೆಯ ಗೋವಿಂದರಾಜು 500 ಬಾಟೆಲ್ ಸಿಕ್ಕಿದವರನ್ನ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾನೆ. 20 ಬಾಟೆಲ್ ಇಟ್ಟಿದ್ದ ರೈತರು ಹೊಲಗಳಲ್ಲಿ ಕೆಲಸ ಮಾಡಿ ಕುಡಿಯಲು ಇಟ್ಟುಕೊಂಡಿದ್ದ ಜೈಲಿಗೆ ಕಳುಹಿಸುತ್ತೀರಿ ಎಂದು ಗರಂ ಆಗಿದ್ದಾರೆ. ಅಲ್ಲದೇ ಇದನ್ನೆಲ್ಲ ನಿಲ್ಲಿಸಲು ಸರ್ಕಾರಕ್ಕೆ ಹೇಳಿ. ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ ಎಂದು ಚಾರ್ಜ್ ಮಾಡಿದ್ದಾರೆ.
PublicNext
14/02/2022 03:51 pm