ಹಾಸನ: ಎಂಎಲ್‌ಸಿ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ಪಕ್ಷದ ಎನ್.ಆರ್.ಸಂತೋಷ್ ಮತ್ತು ವಿಜಯ್ ಕುಮಾರ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಇಡೀ ಸಭೆ ರಣಾಂಗಣವಾಗಿತ್ತು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿಯ ಇಂದು ಅರಸೀಕೆರೆ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಸಭೆ ನಡೆದಿತ್ತು. ಸಚಿವ ಕೆ ಗೋಪಾಲಯ್ಯ, ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಕೂಡ ಈ ಸಭೆಯಲ್ಲಿದ್ದರು. ಆದರೆ ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ವೇದಿಕೆ ಮೇಲೆ ಕುಳಿತಿದ್ದಕ್ಕೆ ವಿಜಯ್ ಕುಮಾರ್ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.
ಇದರಿಂದ ಸಂತೋಷ್ ಮತ್ತು ವಿಜಯ್ ಕುಮಾರ್ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಮ್ಮ ಮುಖಂಡರ ಮುಂದೇನೆ ಕಾರ್ಯಕರ್ತರು ಬಡಿದಾಡಿಕೊಂಡರು. ಈ ಘಟನೆಯಲ್ಲಿ ನಾಲ್ವರಿಗೆ ಸಣ್ಣ ಪುಟ್ಟ ಗಾಯ ಆಗಿವೆ.ಗಾಯಾಳುಗಳನ್ನ ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
30/11/2021 04:19 pm