ಚಂಡೀಗಡ: ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೈಮುಗಿದು, ಕಾಲಿಗೆ ಬಿದ್ದು ಮತ ಕೇಳುವ ಕೆಲ ಜನ ಪ್ರತಿನಿಧಿಗಳು ಗೆದ್ದು ಬಂದ ಬಳಿಕ ಜನರನ್ನೇ ಮರೆತುಬಿಡುತ್ತಾರೆ. ಅಷ್ಟೇ ಯಾಕೆ ನೀವೇನ್ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ ಹಲ್ಲೆ ಮಾಡುತ್ತಾರೆ. ಇಂತಹದ್ದೇ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿದೆ.
ಪಠಾಣ್‌ಕೋಟ್ ಜಿಲ್ಲೆಯ ಭೋವಾದಲ್ಲಿ ಪಂಜಾಬ್ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಜನಸಭೆಯೊಂದರಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಜೋಗಿಂದರ್ ಪಾಲ್ ಅವರು ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಯುವಕ ಮೊದಲ ಬಾರಿ ಪ್ರಶ್ನೆ ಮಾಡಿದಾಗ ಜೋಗಿಂದರ್ ಪಾಲ್ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಸಭೆಯಿಂದ ಹೊರಹಾಕಿದರು. ಆದರೆ ಮತ್ತೆ ಸಭೆಯಲ್ಲಿ ಪ್ರತ್ಯಕ್ಷನಾದ ಯುವಕ, ಜೋಗಿಂದರ್ ಪಾಲ್ ಅವರನ್ನು ಮತ್ತೆ ಪ್ರಶ್ನಿಸತೊಡಗಿದ. ಇದರಿಂದ ಕೆರಳಿದ ಜೋಗಿಂದರ್ ಪಾಲ್, ಆತನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೇ, ಆತನ ಮೇಲೆ ಹಲ್ಲೆಗೂ ಮುಂದಾದರು. ಶಾಸಕರ ಬೆಂಬಲಿಗರೂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
PublicNext
20/10/2021 02:41 pm