ಧಾರವಾಡ: ಡ್ರಗ್ಸ್ ಕೇಸ್ ಕುರಿತ ಚಾರ್ಜ್‌ಶೀಟ್‌ನಲ್ಲಿ ತಾನು ನಿರೂಪಕಿ ಅನುಶ್ರೀ ಹೆಸರು ಹೇಳಿಲ್ಲ ಎಂದು ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ನೀಡಿರುವ ಹೇಳಿಕೆ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಈಗಾಗಲೇ ಈ ಪ್ರಕರಣ ಸಂಬಂಧ ಎಲ್ಲಾ ರೀತಿಯ ವಿಚಾರಣೆ ಮುಗಿದಿದೆ. ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಮತ್ತೆ ಏನಾದರೂ ಇದ್ದರೆ ಪುನಃ ವಿಚಾರಣೆ ಆಗುತ್ತದೆ. ಈಗ ಹೆಸರು ಯಾರು ಹೊರಗೆ ತಂದಿದ್ದಾರೆ. ಯಾರ್ಯ್ಯಾರೋ ಏನೇನೋ ಪ್ರಸ್ತಾಪ ಮಾಡುತ್ತಿದ್ದಾರೆ. ಕೋರ್ಟ್ ಮತ್ತು ಪೊಲೀಸ್ ಯಾರೂ ಹೆಸರು ಪ್ರಸ್ತಾಪ ಮಾಡಿಲ್ಲ. ಮಧ್ಯದಲ್ಲಿ ಯಾರೋ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಆಗುತ್ತಾ? ಎಂದು ಸಚಿವರು ಪ್ರಶ್ನಿಸಿದರು.
PublicNext
08/09/2021 08:19 pm