ಬೆಂಗಳೂರು: ಬಿಜೆಪಿ ನಾಯಕ ಚಿ.ನ ರಾಮು ಅವರಿಗೆ ವಿಡಿಯೋ ಕಾಲ್ ಮೂಲಕ ಸಂಕಷ್ಟ ಎದುರಾಗಿದೆ. ಫೇಸ್ ಬುಕ್ ಮೂಲಕ ರಾಮು ಅವರನ್ನು ಪರಿಚಯ ಮಾಡಿಕೊಂಡ ಯುವತಿ ನಂತರ ಮೆಸೆಂಜರ್ ನಲ್ಲಿ ಚಾಟ್ ಮಾಡಿದ್ದಾಳೆ. ಅವರ ವಾಟ್ಸ್ಆ್ಯಪ್ ಸಂಖ್ಯೆಯನ್ನೂ ಕೇಳಿ ಪಡೆದಿದ್ದಾಳೆ ಎನ್ನಲಾಗಿದೆ. ನಂತರ ವಿಡಿಯೋ ಕಾಲ್ ಮಾಡಿದ ಆಕೆ ಈಗ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಎಂಬ ಮಾಹಿತಿ ಇದೆ. ಇದರಿಂದ ಬೇಸತ್ತ ಚಿ.ನಾ ರಾಮು ಬೆಂಗಳೂರಿನ ಸೈಬರ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದಾರೆ.
ಮೊದಲು ವಿಡಿಯೋ ಕಾಲ್ ಮಾಡಿದ ಯುವತಿ ಅದರಲ್ಲಿ ಅಸಭ್ಯವಾಗಿ ವರ್ತಿಸಿದ್ದಾಳೆ. ಇದೆಲ್ಲ ಮಾತುಕತೆ ಮುಗಿದ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಿ.ನಾ ರಾಮುಗೆ ಕರೆ ಮಾಡಿ ಬೆದರಿಸಿದ್ದಾನೆ. 'ನಿಮ್ಮ ಖಾಸಗೀ ಫೋಟೋಗಳು ನನ್ನ ಬಳಿ ಇವೆ. ನಾವು ಕೇಳಿದಷ್ಟು ಹಣ ಕೊಡಿ. ಇಲ್ಲದಿದ್ರೆ ನಿಮ್ಮ ಆ ಫೋಟೋಗಳು ದೇಶಾದ್ಯಂತ ವೈರಲ್ ಆಗುತ್ತೆ ಎಂದು ಬೆದರಿಕೆ ಹಾಕಿದ್ದಾನೆ. ಪರಿಣಾಮ ಆ ಅಪರಿಚಿತನ ಖಾತೆಗೆ ಚಿ.ನಾ ರಾಮು 31,500 ಹಣ ಹಾಕಿದ್ದಾರಂತೆ. ಇನ್ನಷ್ಟು ಹಾಕುವಂತೆ ಆ ವ್ಯಕ್ತಿ ಮತ್ತೆ ಕರೆ ಮಾಡಿ ಬೆದರಿಕೆ ಹಾಕಿದಾಗ ಚಿ.ನಾ ರಾಮು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
PublicNext
22/08/2021 07:59 am