ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಗಾಳದಲ್ಲಿ ಚುನಾವಣೆ ನಂತರ ಹಿಂಸಾಚಾರ: ಸಿಬಿಐ ತನಿಖೆಗೆ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ನಂತರ ನಡೆದ ಹಿಂಸಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಲು ಆದೇಶಿಸಲಾಗಿದೆ.

ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆ ಸಿಬಿಐ ನಡೆಸಲಿದ್ದು, ಇನ್ನುಳಿದ ಪ್ರಕರಣಗಳ ತನಿಖೆಯನ್ನು ಎಸ್‍ಐಟಿ ನಡೆಸಬೇಕು. ಇದರ ಜೊತೆಗೆ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ನ್ಯಾಯಾಲಯ ಸಿಬಿಐ ಮತ್ತು ಎಸ್‍ಐಟಿ ಆರು ವಾರಗಳಲ್ಲಿ ತನಿಖೆಯ ವರದಿ ನೀಡುವಂತೆ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲು ವಿಫಲವಾಗಿದ್ದು, ಚುನಾವಣಾ ಆಯೋಗ ಉತ್ತಮವಾಗಿ ಕೆಲಸ ಮಾಡಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೋಲ್ಕತ್ತಾದ ಪೊಲೀಸ್ ಕಮೀಷನರ್ ಸೋಮೆನ್ ಮಿತ್ರಾ ತನಿಖೆಯ ಭಾಗವಾಗಲಿದ್ದಾರೆ.

Edited By : Nagaraj Tulugeri
PublicNext

PublicNext

19/08/2021 02:40 pm

Cinque Terre

48.27 K

Cinque Terre

2

ಸಂಬಂಧಿತ ಸುದ್ದಿ