ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಹಣ ವರ್ಗಾವಣೆ ಆರೋಪದ ಕುರಿತು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಇದು ಆದಾಯ ತೆರಿಗೆ ಇಲಾಖೆ ಅದಿಕಾರಿಗಳ ದಾಳಿ ಎಂದೇ ಬಿಂಬಿತವಾಗಿತ್ತು.
ಐಎಂಎ ಪ್ರಕರಣದಲ್ಲಿ ಜಮೀರ್ ಅಹ್ಮದ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ವಿಚಾರಣೆಗೆ ಹಾಜರಾಗಿದ್ದರು. ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿವೆ. ಇಡಿ ವಶದಲ್ಲಿರುವ ಜಮೀರ್ ಅಹ್ಮದ್ ವಿಚಾರಣೆ ನಡೆಸಲಾಗುತ್ತಿದೆ.
ಮನ್ಸೂರ್ ಅಲಿ ಖಾನ್ ಗೆ ಜಮೀರ್ ಅಹ್ಮದ್ ಖಾನ್ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿಯ ನಿವೇಶನ ಮಾರಾಟ ಮಾಡಿದ್ದರು. ಶಾಸಕರಾಗಿರುವ ಜಮೀರ್ ಅಹ್ಮದ್ ವಿದೇಶದಲ್ಲಿ ಕ್ಯಾಸಿನೋ ಬಾರ್ ಗಳು, ಸೇರಿದಂತೆ ಬೇರೆ ಬೇರೆ ವ್ಯವಹಾರಗಳು ನಡೆಸ್ತಿರೊ ಬಗ್ಗೆ ಮಾಹಿತಿ ಐಟಿ ಇಲಾಖೆಗೆ ಲಭ್ಯವಾಗಿದ್ದ ಎನ್ನಲಾಗಿದೆ.
PublicNext
05/08/2021 10:59 am