ಮುಂಬೈ: ಕೇಂದ್ರಾಡಳಿತ ಪ್ರದೇಶ ದಾದರ್ ನಗರ ಮತ್ತು ಹವೇಲಿ ಸಂಸದ ಮೋಹನ್ ದೇಲ್ಕರ್ (58) ಅವರ ಮೃತದೇಹ ಮುಂಬೈನ ಮರಿನ್ ಡ್ರೈವ್ ಹೋಟೆಲ್‌ವೊಂದರಲ್ಲಿ ಇಂದು ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಅವರ ಸಾವಿನ ಸುತ್ತಮುತ್ತ ಅನುಮಾನಗಳೂ ಮೂಡಿವೆ. ಮೋಹನ್ ದೇಲ್ಕರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಇದರ ಹಿಂದಿನ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಿದ್ದಾರೆ.
ಮೋಹನ್ ದೇಲ್ಕರ್ ಅವರು ದಾದರ್ ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿದ್ದರು. ಮೊದಲು ಕಾಂಗ್ರೆಸ್ನಲ್ಲಿದ್ದ ಅವರು 2019ರಲ್ಲಿ ಕಾಂಗ್ರೆಸ್ ತೊರೆದು ಜೆಡಿಯು ಬೆಂಬಲದಿಂದ ಪಕ್ಷೇತರರಾಗಿ ಗೆದ್ದಿದ್ದರು.
PublicNext
22/02/2021 04:15 pm