ತುಮಕೂರು; ಸಾಮಾಜಿಕವಾಗಿ ಅಶಾಂತಿ ಮೂಡಿಸುವ ಅಪಾಯದ ಹಿನ್ನೆಲೆ ಫ್ಲೆಕ್ಸ್ ಗಳ ತೆರವು ಯೋಜನೆಗೆ ಪಾಲಿಕೆ ಮುಂದಾಗಿದೆ. ಗುರುವಾರ ತಡರಾತ್ರಿ ಪಾಲಿಕೆ ಕಾರ್ಯಾಚರಣೆ ಕೈಗೊತ್ತಿಕೊಂಡಿದೆ ಗಣೇಶೋತ್ಸವಕ್ಕೆ ಶುಭ ಕೋರಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಅಳವಡಿಸಿದ್ದ ವೀರ ಸಾವರ್ಕರ್ ಹಾಗೂ ಬಾಲ ಗಂಗಾಧರ ತಿಲಕರನ್ನು ಒಳಗೊಂಡ ಫ್ಲೆಕ್ಸ್ ಗಳನ್ನು ಪಾಲಿಕೆ ಏಕಾಯಕಿ ತರವು ಮಾಡಿದೆ.
ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆ, ದಾಸಪ್ಪ ಪಾರ್ಕ್ ಸೇರಿದಂತೆ 5 ಜಾಗದಲ್ಲಿ ಫ್ಲೆಕ್ಸ್ ಹಾಕಲು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಾಲಿಕೆಯಿಂದ ಅನುಮತಿ ಪಡೆದಿದ್ದರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿ ಗಣೇಶ್ ಅವರು ಹಾಕಿಸಿದ್ದ ಫ್ಲೆಕ್ಸ್ ನಲ್ಲಿದ್ದ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಹರಿದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದರು. ಇತ್ತೀಚಿಗೆ ಬಿಜೆಪಿ ಜಿಲ್ಲಾ ಮಟ್ಟದ ಮುಖಂಡರೊಬ್ಬರು ತಮ್ಮ ಜನ್ಮದಿನದ ಆಚರಣೆಗಾಗಿ ತುಮಕೂರು ನಗರದ ತುಂಬೆಲ್ಲ ಫ್ಲೆಕ್ಸ್ ಗಳ ಜಾತ್ರೆ ಮಾಡಿದ್ದರು, ಅವುಗಳನ್ನು ತೆರವು ಮಾಡಿರಲಿಲ್ಲ. ಅವರ ಜನ್ಮ ದಿನ ಆಚರಣೆಗಿಲ್ಲದ ನಿಬಂದನೆ ಗಣೇಶೋತ್ಸವಕ್ಕೆ ಹೇರಿರುವುದನ್ನು ಪ್ರಜ್ಙಾವಂತರು ಖಂಡಿಸಿದ್ದಾರೆ.
PublicNext
26/08/2022 02:10 pm