ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಜಿಹಾದಿಗಳ ತಲೆತೆಗೆಯುತ್ತೇವೆ : ಎಸ್. ಟಿ. ವೀರೇಶ್ ವಿವಾದಾತ್ಮಕ ಹೇಳಿಕೆ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೀರೋ ಇಲ್ವೋ. ನಮ್ಮ ಕಾರ್ಯಕರ್ತರಿಗೆ ಬಿಟ್ಟುಬಿಡಿ. ಜಿಹಾದಿಗಳ ತಲೆ ತೆಗೆಯುತ್ತೇವೆ ಎಂದು ಬಿಜೆಪಿ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ವಿರೋಧಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ವೇಳೆ ಮಾತನಾಡಿದ ಅವರು, ಪ್ರಜ್ಞೆ ಇಟ್ಟುಕೊಂಡು ಹೇಳುತ್ತಿದ್ದೇನೆ. ಬಿಜೆಪಿ ನಾಯಕರು ನಮ್ಮ ರಕ್ತದ ಮೇಲೆ ಅಧಿಕಾರ ಹಿಡಿದಿದ್ದಾರೆ. ಪ್ರವೀಣ್ ಹತ್ಯೆಗೆ ಬಗ್ಗೆ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಶಸ್ತ್ರ ಇಳಿದು ಕಾರ್ಯಕರ್ತರು ಬೀದಿಗಿಳಿಯುತ್ತಾರೆ. ನಾವು ನಾಳೆ ಸಾಯೋದು ಇಂದೇ ಸಾಯುತ್ತೇವೆ. ಜಿಹಾದಿಗಳ ತಲೆ ತೆಗೆಯುತ್ತೇವೆ. ಅಧಿಕಾರದಲ್ಲಿ ಇರುವ ನಾಯಕರು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಆಗುತ್ತೆ ಎಂದು ಹೇಳಿದರು.

Edited By :
PublicNext

PublicNext

27/07/2022 09:42 pm

Cinque Terre

51.13 K

Cinque Terre

10

ಸಂಬಂಧಿತ ಸುದ್ದಿ