ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಮತೆಯ ಬಂಗಾಳದಲ್ಲಿ ಹತ್ಯಾಕಾಂಡ : ದೀದಿ ಸರ್ಕಾರಕ್ಕೆ ಕೋರ್ಟ್ ಚಾಟಿ

ಕೊಲ್ಕತ್ತಾ : ಟಿಎಂಸಿ ಮುಖಂಡನ ಹತ್ಯೆ ಪ್ರತಿಕಾರವಾಗಿ ಆತನ ಬೆಂಬಲಿಗರು ಮಾಡಿದ್ದಾರೆ ಎನ್ನಲಾದ ದಾಳಿಯಲ್ಲಿ 6 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ 8 ಜನರ ಸಜೀವ ದಹನ ಮಾಡಿದ ಘಟನೆ ಕಾಡ್ಗಿಚ್ಚಿನಂತೆ ಎಲ್ಲೇಡೆ ವೈರಲ್ ಆಗಿದೆ. ಈ 8 ಜನರ ದಹನದ ಜೊತೆಗೆ ಇನ್ನು 10 ಕ್ಕೂ ಹೆಚ್ಚು ಮನೆಗಳಿಗೆ ಬೆಂಬಲಿಗರು ಬೆಂಕಿ ಇಟ್ಟಿದ್ದಾರೆ ಇದರಿಂದ ಹಲವು ಮಂದಿ ತೀವ್ರ ಗಾಯಗೊಂಡಿದ್ದಾರೆ.

ಈ ಎಲ್ಲ ಘಟನೆ ಕಂಡ ಕೆಲ ಗ್ರಾಮಸ್ಥರು ರಾತ್ರೋ ರಾತ್ರಿ ಗ್ರಾಮ ತೊರೆದು ನಿರಾಶ್ರಿತರ ಶಿಬಿರ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಚಾಟಿ ಬೀಸಿದೆ.

ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ತನಿಖಾ ರಿಪೋರ್ಟ್ ನೀಡಬೇಕು. ಪ್ರಕರಣದ ಸಾಕ್ಷಿಗಳ ರಕ್ಷಣೆ ಮಾಡಬೇಕು, ಮೃತರ ಪೋಸ್ಟ್ ಮಾರ್ಟಮ್ ವಿಡಿಯೋ ರೆಕಾರ್ಡ್ ಮಾಡಬೇಕು.ಕೂಡಲೇ ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಅದಕ್ಕೂ ಮೊದಲು ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ಕೊಡಬೇಕು ಎಂದು ಆದೇಶಿಸಿದೆ.

Edited By : Nirmala Aralikatti
PublicNext

PublicNext

23/03/2022 04:41 pm

Cinque Terre

90.3 K

Cinque Terre

15

ಸಂಬಂಧಿತ ಸುದ್ದಿ