ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಗುಲಗಳಲ್ಲಿ ಭಜನೆ, ಮಂತ್ರ ಪಠಣ: ಬೆಂಗಳೂರಲ್ಲಿ ಹಿಂದೂ ಮುಖಂಡರು ಪೊಲೀಸ್‌ ವಶಕ್ಕೆ

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ರಾಮಮಂತ್ರ ಜಪ ಪ್ರಾರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಹಿಂದೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ದೇವಾಲಯಗಳ ಸುತ್ತಲೂ ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಹಲವು ದೇವಸ್ಥಾನಗಳ ಸುತ್ತ ಪೊಲೀಸ್‌ ಸರ್ಪಗಾವಲು ಕಾಣುತ್ತಿದೆ.

ಸೋಮವಾರ ಬೆಳಗ್ಗೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸುವುದಾಗಿ ಶ್ರೀರಾಮಸೇನೆ ಕರೆ ನೀಡಿತ್ತು. ನಗರದ ವಿವೇಕನಗರದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಭದ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹಿತಕರ ಘಟನೆ ಸಂಭವಿಸದಂತೆ ಕಣ್ಗಾವಲು ಹಾಕಿದ್ದೇವೆ. ಕೆಲ ಹಿಂದೂ ಮುಖಂಡರನ್ನು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.

ಮಸೀದಿಗಳ ಮೇಲಿನ ಮೈಕ್​ಗಳ ತೆರವು ಆಗ್ರಹಿಸಿ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ರಾಮತಾರಕ ಮಂತ್ರ ಪಠಿಸಿದರು. ಬೆಂಗಳೂರಿನ ಉಳ್ಳಾಲ ಬಳಿಯ ಹಿಂದೂ ಭಕ್ತರ ಮನೆಯಲ್ಲಿ ರಾಮ ಜಪ ಮಾಡಲಾಗಿದ್ದು, ಹಿಂದೂಪರ ಕಾರ್ಯಕರ್ತರು ಜಪದಲ್ಲಿ ಭಾಗಿಯಾಗಿದ್ದರು.

Edited By : Nagaraj Tulugeri
PublicNext

PublicNext

09/05/2022 11:14 am

Cinque Terre

119.69 K

Cinque Terre

15

ಸಂಬಂಧಿತ ಸುದ್ದಿ