ನವದೆಹಲಿ : ಭಾರತದಲ್ಲಿ ರೈತರ ಮೇಲೆ ಹಿಂಸಾಚಾರ ನಡೆದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಶ್ವೇತ ಭವನದ ಮುಂದೆ ನಾವು ಪ್ರತಿಭಟನೆ ನಡೆಸುತ್ತೇವೆಂದು ಖಲಿಸ್ತಾನಿ ಉಗ್ರ್ರ ಗುಂಪು ಎಚ್ಚರಿಕೆ ನೀಡಿದೆ. ಪ್ರಧಾನಿ ಮೋದಿಗೆ ಅಮೆರಿಕ ಭೇಟಿ ವೇಳೆ ನಿದ್ರೆ ಇಲ್ಲದ ರಾತ್ರಿಗಳನ್ನು ನೀಡುತ್ತೇವೆ ಎಂದು ಖಲಿಸ್ತಾನಿಗಳು ಪ್ರತಿಜ್ಞೆ ಮಾಡಿದೆ.
ಕ್ವಾಡ್ ಲೀಡರ್ ಶೃಂಗಸಭೆ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ವಿಭಾಗದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಎಸ್ ಎಫ್ ಜೆ (ಸಿಖ್ ಪಾರ್ ಜಸ್ಟೀಸ್) ಜನರಲ್ ಕೌನ್ಸೆಲ್ ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಪ್ರಧಾನಿ ಮೋದಿ ಅವರಿಗೆ “ಅಮೆರಿಕದಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು” ನೀಡುವುದಾಗಿ ಹೇಳಿದರು.
PublicNext
17/09/2021 07:33 am