ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೂಲನ್ ದೇವಿ ಕೊಂದ ಶೇರ್ ಸಿಂಗ್ ರಾಣಾ ಪಬ್ಲಿಕ್ ನೆಕ್ಸ್ಟ್ ಜೊತೆಗೆ Exclusive ಟಾಕ್

ಬೆಂಗಳೂರು: ಪೂಲನ್ ದೇವಿ ಕೊಂದ ಶೇರ್ ಸಿಂಗ್ ರಾಣಾ ಪಬ್ಲಿಕ್ ನೆಕ್ಸ್ಟ್ ಜೊತೆಗೆ Exclusive ಟಾಕ್

ಬೆಂಗಳೂರು:ಪೂಲನ್ ದೇವಿ. ಈ ಹೆಸರು ಅಟ್ಟಹಾಸ ಮೆರೆದ ಹೆಸರು. ಈ ಹೆಸರು ಕೇಳಿದ್ರೆ ಸಾಕು.ಇಡೀ ಉತ್ತರ ಭಾರತ ನಡುಗಿ ಹೋಗುತ್ತಿತ್ತು. ಅದೇ ಪೂಲನ್ ದೇವಿಯನ್ನ ಕೊಂದು ಹಾಕಿ ಜೈಲು ಸೇರಿದ್ದ ಆ ಹಂತಕ, 2004 ಫೆಬ್ರವರಿ 17 ನೇ ತಾರೀಕು ಇಡೀ ಭಾರತವೇ ತಿಹಾರ್ ಜೈಲಿನತ್ತ ತಿರುಗಿ ನೋಡುವಂತೆ ಮಾಡಿದ್ದ.

ಹೌದು. ಆ ಶೇರ್ ಸಿಂಗ್ ರಾಣಾ ತಿಹಾರ್ ಆಗ ಜೈಲಿನಿಂದ ಪರಾರಿ ಆಗಿದ್ದ. ಯಾರೂ ಪರಾರಿ ಆಗಲು ಸಾಧ್ಯವಾಗದೇ ಇರೋ ಜೈಲಿನಿಂದ ಪರಾರಿ ಆದ ಶೇರ್ ಸಿಂಗ್ ರಾಣಾ, ಬಾಂಗ್ಲಾದೇಶದ ಮೂಲಕ ಅಫ್ಘಾನಿಸ್ತಾನ,ಲಾಹೋರ್ ಗೆ ಪಲಾಯನ ಮಾಡಿದ್ದ.

ಪೂಲನ್ ದೇವಿಯನ್ನ ಈತ ಹತ್ಯೆ ಮಾಡಿ ಫೇಮಸ್ ಆಗಿ ಬಿಟ್ಟ, ಆದರೆ, ಆತನ ಜೊತೆಗೆ ಆಗ ಯಾರೆಲ್ಲ ಸಾಥ್ ಕೊಟ್ಟಿದ್ದರು. ಅಂದ್ಹಾಗೆ ಈತ ಭಾರತ ದೇಶದ ಅತಿ ಭದ್ರತೆಯ ತಿಹಾರ್ ಜೈನಿಂದ ಪರಾರಿ ಆಗಿದ್ದಾದರೂ ಹೇಗೆ ? ಈ ಎಲ್ಲ ಸತ್ಯಗಳನ್ನ ಅದೇ ಶೇರ್ ಸಿಂಗ್ ರಾಣಾ ಈಗ ಬಿಚ್ಚಿಟ್ಟಿದ್ದಾನೆ.

ಹೌದು. ಶೇರ್ ಸಿಂಗ್ ರಾಣಾ ತಿಹಾರ್ ಜೈನಿಂದ ತಪ್ಪಿಸಿಕೊಂಡದ್ದು ಕೂಡ ಆಗ ಅತಿ ದೊಡ್ಡ ಸುದ್ದಿ ಆಗಿತ್ತು. ಅತಿ ಹೆಚ್ಚು ಭದ್ರತೆಯ ಜೈಲ್ ಇದಾಗಿದ್ದ, ಇಲ್ಲಿಂದ ಯಾರಂದ್ರೆ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ, ಶೇರ್ ಸಿಂಗ್ ರಾಣಾ ತಪ್ಪಿಸಿಕೊಂಡು ಹೋಗಿ ಇಡೀ ದೇಶವೇ ತಿಹಾರ್ ಜೈಲಿನತ್ತ ತಿರುಗಿ ನೋಡುವಂತೆ ಮಾಡಿದ್ದ.

ಪೂಲನ್ ದೇವಿ ಕೊಂದ ಸತ್ಯ-ತಿಹಾರ್ ಜೈಲಿನಿಂದ ತಪ್ಪಿಸಿಕೊಂಡ ಆ ರೋಚಕ ಕತೆ. ಎಲ್ಲವನ್ನೂ 16 ವರ್ಷದ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮೊಟ್ಟ ಮೊದಲ ಬಾರಿಗೆ ಶೇರ್ ಸಿಂಗ್ ರಾಣಾ ಹಂಚಿಕೊಂಡಿದ್ದಾನೆ.

ಹೌದು. ನಮ್ಮ ಪ್ರತಿನಿಧಿ ನವೀನ್ ಜೊತೆಗೆ ಶೇರ್ ಸಿಂಗ್ ರಾಣಾ, ತನ್ನ ಗತಕಾಲದ ಸಾಹಸಗಳನ್ನ ಹಂಚಿಕೊಂಡಿದ್ದಾನೆ. ಈತ ತನ್ನ

ಆ ರೋಚಕ ಕಥೆಯನ್ನ ಎಳೆ ಎಳೆಯಾಗಿ ಇಲ್ಲಿ ಬಿಚ್ಟಿದ್ದಾನೆ.

Edited By : Somashekar
PublicNext

PublicNext

20/05/2022 08:48 pm

Cinque Terre

110.5 K

Cinque Terre

6

ಸಂಬಂಧಿತ ಸುದ್ದಿ