ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ನಿನ್ನೆ ಫೆಬ್ರವರಿ 14ರಂದು ಪ್ರಧಾನಿ ಮೋದಿ ತಮಿಳು ನಾಡು ಹಾಗೂ ಕೇರಳ ರಾಜ್ಯಗಳಿಗೆ ಭೇಟಿ ನೀಡಿದ್ದರು. ಇದಕ್ಕೂ ಮುಂಚಿನ ದಿನವಾದ ಫೆಬ್ರುವರಿ 13ರಂದು "ಗೋ ಬ್ಯಾಕ್ ಮೋದಿ" ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಟ್ ಆಗಿತ್ತು.
ಇದೇ ಹ್ಯಾಷ್ ಟ್ಯಾಗನ್ನು ಟ್ವೀಟ್ ಮಾಡಿದ್ದ ನಟಿ ಓವಿಯಾ ಮೇಲೆ ಕೇಸ್ ದಾಖಲಿಸಲಾಗಿದೆ. ತಮಿಳುನಾಡು ಬಿಜೆಪಿ ಕಾನೂನು ವಿಭಾಗದ ಅಲೆಕ್ಸಿಸ್ ಸುಧಾಕರ್ ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ. ಗೋ ಬ್ಯಾಕ್ ಮೋದಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರ ಹಿಂದಿನ ಉದ್ದೇಶ ಏನು? ಇದರಂತೆ ಇನ್ನೂ ಯಾರು ಟ್ವೀಟ್ ಮಾಡಿದ್ದಾರೆ? ಟ್ವೀಟ್ ಮಾಡಿದ ಸೆಲೆಬ್ರಿಟಿಗಳಿಗೂ ವಿದೇಶಿಗರಿಗೂ ಏನಾದರೂ ಲಿಂಕ್ ಇದೆಯಾ ಎಂಬುದನ್ನು ತನಿಖೆ ಮಾಡಿ ಎಂದು ಅಲೆಕ್ಸಿಸ್ ಸುಧಾಕರ್ ತಾವು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
PublicNext
15/02/2021 06:58 pm