ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಕೆದಾಟು ಪಾದಯಾತ್ರೆ: ಜನರನ್ನು ಹುರಿದುಂಬಿಸಿದ ಉಮಾಶ್ರೀ, ಸಾಧು ಕೋಕಿಲ

ರಾಮನಗರ: ಕಾಂಗ್ರೆಸ್‌ನ ಸಮಸ್ತ ನಾಯಕರು ಕಾವೇರಿ ಸಂಗಮದಲ್ಲಿ ಸಮಾವೇಶ ಕೈಗೊಂಡು ಮೇಕೆದಾಟು ಯೋಜನೆ ಶೀಘ್ರವೇ ಜಾರಿಯಾಗಬೇಕು ಎಂದು ಒಕ್ಕೊರಲ ಒತ್ತಾಯವನ್ನು ಮಂಡಿಸಿದರು.

ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಹಬ್ಬದ ಮಾದರಿಯ ಸಂಭ್ರಮದ ವಾತವರಣ ಕಂಡು ಬಂತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಲ್ಲವನ್ನು ಖುದ್ದಾಗಿ ಪರಿಶೀಲಿಸಿ ಸಲಹೆ-ಸೂಚನೆ, ನಿರ್ದೇಶನ ನೀಡಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಸಮೀಪ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಅವರು ಸಂಗಮದಲ್ಲಿ ಒಂದಷ್ಟು ದೂರ ತೆಪ್ಪದಲ್ಲಿ ಪ್ರಯಾಣ ಮಾಡಿ ತಾವೇ ಹುಟ್ಟು ಹಾಕಿ ಗಮನ ಸೆಳೆದರು.

ಸಾಂಸ್ಕೃತಿಕ ತಂಡಗಳಾದ ವೀರಗಾಸೆ, ನಂದಿಕೋಲು, ಪಟದ ಕುಣಿತ, ಡೋಲು-ತಮಟೆ ವಾದ್ಯಗಳು ಹೋರಾಟಕ್ಕೆ ರಂಗು ತಂದಿದ್ದವು. ಮಾಜಿ ಸಚಿವೆ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಹಿರಿಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ದೇಶಿಸಿದರು. ಈ ವೇಳೆ ಉಮಾಶ್ರಿ ಅವರು ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಹುರಿದುಂಬಿಸಿದರು.

Edited By : Vijay Kumar
PublicNext

PublicNext

09/01/2022 03:39 pm

Cinque Terre

92.95 K

Cinque Terre

15

ಸಂಬಂಧಿತ ಸುದ್ದಿ