ಬೆಂಗಳೂರು: 1983ರಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದ ಸನ್ನಿವೇಶವನ್ನೇ ಕತೆಯಾಗಿರಿಸಿಕೊಂಡು ನಿರ್ಮಿಸಲಾದ '83' ಚಿತ್ರವನ್ನು ಸಿಎಂ ಬಸವರಾಜ್ ಬೊಮ್ಮಾಯಿ ವೀಕ್ಷಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದ ಫೋರಂ ಮಾಲ್‌ನಲ್ಲಿರುವ ಪಿವಿಆರ್ ಥಿಯೇಟರ್‌ಗೆ ಬಂದ ಸಿಎಂ ಚಿತ್ರ ವೀಕ್ಷಿಸಿದ್ದಾರೆ. ಇದೇ ವೇಳೆ ಸಚಿವ ಆರ್. ಅಶೋಕ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸೈಯದ್ ಕಿರ್ಮಾನಿ ಉಪಸ್ಥಿತರಿದ್ದರು.
ಚಿತ್ರ ವೀಕ್ಷಣೆಗೂ ಮುನ್ನ ದಿವಂಗತ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮ ಅವರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಿಸಲಾಯಿತು.
PublicNext
26/12/2021 10:46 pm