ಭೋಪಾಲ್: ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಕೆಲವರು ಇದನ್ನು ವಿವಾದವೆಂದೂ ಬಣ್ಣಿಸಿದ್ದಾರೆ. ಈ ನಡುವೆ ಮತ್ತೊಂದು ವಿವಾದ ಮೆತ್ತಿಕೊಂಡಿದೆ.
ಕಾಶ್ಮೀರ್ ಫೈಲ್ಸ್ ಸಿನಿಮಾ ವಿರೋಧಿಸಿ ಟ್ವೀಟ್ ಮಾಡಿದ್ದ ಮಧ್ಯ ಪ್ರದೇಶದ ಐಎಎಸ್ ಅಧಿಕಾರಿ ನಿಯಾಝ್ ಖಾನ್ ಮೇಲೆ ಮಧ್ಯ ಪ್ರದೇಶ ಸರ್ಕಾರ ಗರಂ ಆಗಿದೆ. ನಿಯಾಝ್ ಖಾನ್ ಅವರು ಮಧ್ಯ ಪ್ರದೇಶದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶಾದ್ಯಂತ ಮುಸ್ಲಿಮರ ಹತ್ಯೆಗಳಾಗಿವೆ. ಆ ಬಗ್ಗೆಯೂ ಸಿನಿಮಾ ಮಾಡಿ. 'ಅಲ್ಪಸಂಖ್ಯಾತ ಸಮುದಾಯಗಳೆಂದರೆ ಕೀಟಗಳಲ್ಲ'. ಅವರು ಕೂಡ ದೇಶದ ನಾಗರಿಕರು. 'ಕಾಶ್ಮೀರಿ ಫೈಲ್ಸ್ ಸಿನಿಮಾದಿಂದ ಗಳಿಕೆಯಾದ ಹಣವನ್ನು ಹತ್ಯೆಯಾದ ಕಾಶ್ಮೀರಿ ಪಂಡಿತರ ಮಕ್ಕಳ ಶಿಕ್ಷಣ ಹಾಗೂ ಪುನರ್ವತಿಗಾಗಿ ಮೀಸಲಿಡಿ. ಲಾಭದ ಹಣವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿ. ಎಂದು ನಿಯಾಝ್ ಖಾನ್ ಟ್ವೀಟ್ ಮಾಡಿದ್ದರೆ.
ಇನ್ನೊಂದು ಟ್ವೀಟ್‌ನಲ್ಲಿ ಅವರು, 'ಮುಸ್ಲಿಮರ ಹತ್ಯಾಕಾಂಡವನ್ನು ಎತ್ತಿ ತೋರಿಸುವ ಪುಸ್ತಕ ಬರೆಯಲು ಯೋಜಿಸುತ್ತಿದ್ದೇನೆ. ಇದರಿಂದ ಅಲ್ಪಸಂಖ್ಯಾತರ ನೋವು, ಮತ್ತು ಸಂಕಟವನ್ನು ಭಾರತೀಯರ ಮುಂದೆ ತರಲು ಕಾಶ್ಮೀರ್ ಫೈಲ್ಸ್ ರೀತಿಯಲ್ಲಿ ಯಾರಿಗಾದರೂ ಸಿನಿಮಾ ನಿರ್ಮಿಸಲು ಸಹಾಯವಾಗಬಹುದು' ಎಂದು ನಿಯಾಝ್ ಖಾನ್ ತಿಳಿಸಿದ್ದಾರೆ.
ಈ ಟ್ವೀಟ್‌ಗಳ ಬಗ್ಗೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅಸಮಾಧಾನಗೊಂಡಿದ್ದಾರೆ. ನಿಯಾಝ್ ಖಾನ್ ಅವರು ಸರ್ಕಾರಿ ನೌಕರರಿಗಿರುವ ಮಿತಿಗಳನ್ನು ಮೀರಿದ್ದಾರೆ. ಅವರಿಗೆ ಶೋಕಾಸ್ ನೋಟೀಸ್ ಕೊಟ್ಟು ಉತ್ತರ ಪಡೆಯುತ್ತೇವೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
PublicNext
24/03/2022 09:37 am