ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಸಂಪುಟ ಪುನರ್ ರಚನೆ : ವರಿಷ್ಠರ ಅನುಮತಿಗಾಗಿ ದೆಹಲಿ ಪ್ರವಾಸಕ್ಕಾಗಿ ಸಿಎಂ ಅಣಿ

ಬೆಂಗಳೂರು: ಇತ್ತ ಅಧಿವೇಶಕ್ಕೆ ಅಂತ್ಯ ಹಾಡುತ್ತಿದ್ದಂತೆ ಸಿಎಂ ಬಿಎಸ್ ವೈ ದೆಹಲಿಯತ್ತ ಮುಖ ಮಾಡಿದ್ದಾರೆ ಅದು ಮತ್ತೊಮ್ಮೆ ಸಚಿವ ಸಂಪುಟ ಪುನರ್ ರಚನೆಗಾಗಿ.

ಬಹುತೇಕ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ಪುನರ್ ರಚನೆ ಕುರಿತು ಸಿಎಂ ಯಡಿಯೂರಪ್ಪ ಅವರು ಚರ್ಚಿಸಲಿದ್ದಾರೆ.

ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಚಿವ ಸಿಟಿ ರವಿ ಸೇರಿಗಂತೆ ನಾಲ್ಕೈದು ಸಚಿವರು ತಮ್ಮ ಸಚಿವ ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ದೊರಕಿಸಿಕೊಡುವ ಆಲೋಚನೆ ಯಡಿಯೂರಪ್ಪ ಅವರದ್ದಾಗಿದ್ದು, ಇದಕ್ಕಾಗಿ ವರಿಷ್ಠರ ಹಸಿರು ನಿಶಾನೆಗಾಗಿ ದೆಹಲಿಯತ್ತ ಮುಖ ಮಾಡಿದ್ದಾರೆ.

ಮೂಲಗಳ ಪ್ರಕಾರ ಅಕ್ಟೋಬರ್ 2ರಂದು ಸಚಿವ ಸಿ.ಟಿ.ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಇದರಿಂದಾಗಿ ಸಂಪುಟದಲ್ಲಿ ಒಟ್ಟು 7 ಸ್ಥಾನಗಳು ಖಾಲಿ ಉಳಿಯಲಿದ್ದು, ಅಕ್ಟೋಬರ್ ಮೊದಲ ಅಥವಾ 2ನೇ ವಾರದಲ್ಲಿ ಸಂಪುಟ ಪುನಾರಚನೆಯಾಗುವ ಲಕ್ಷಣಗಳು ಗೋಚರಿಸಿವೆ.

ಒಂದು ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವರಿಷ್ಠರ ಒಪ್ಪಿಗೆ ಪಡೆದು ಸಂಪುಟ ಪುನಾರಚನೆ ಮಾಡಿದರೆ ಸಂಪುಟದಲ್ಲಿ ಹಾಲಿ ಇರುವ ನಾಲ್ವರು ಸಚಿವರನ್ನು ಕೈಬಿಟ್ಟು ಹೊಸದಾಗಿ 10 ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

28/09/2020 08:09 pm

Cinque Terre

55.19 K

Cinque Terre

0

ಸಂಬಂಧಿತ ಸುದ್ದಿ