ನವದೆಹಲಿ: ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ. ಈ ಪ್ರಪಂಚದಲ್ಲಿ ನಿಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿ ಎಂದು ವಿವಿಧ ದೇಶಗಳ ರಾಯಭಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು ವಿವಿಧ ದೇಶಗಳ ರಾಯಭಾರಿಗಳೊಂದಿಗೆ ನವದೆಹಲಿಯಲ್ಲಿ ಸಂವಾದ ನಡೆಸಿದರು.
ಕರ್ನಾಟಕದ ಅಭಿವೃದ್ಧಿ ವೈಜ್ಞಾನಿಕವಾಗಿ ಆಗಿದೆ. ತಂತ್ರಜ್ಞಾನದ ಬದಲಾವಣೆಗಳನ್ನು ಅಳವಡಿಸಿಕೊಂಡಿದೆ. ಆದ್ದರಿಂದ ರಾಜ್ಯದ ಎಲ್ಲ ವಲಯಗಳಲ್ಲಿ ಸಹಜವಾದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಸಾಧ್ಯವಾಗಿದೆ. ಮೆಷಿನ್ ಟೂಲ್ಸ್‌ಗಳನ್ನು ಉತ್ಪಾದಿಸುವ ಮೊದಲ ರಾಜ್ಯ. ದೇಶದಲ್ಲಿ ಮೊದಲ ಬಾರಿ ಏರೋಸ್ಪೇಸ್ ಘಟಕವನ್ನು ಸ್ಥಾಪಿಸಿದ ರಾಜ್ಯ ಕರ್ನಾಟಕ. ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ನಿರ್ಮಿಸಲಾದ ಸೆಟಿಲೈಟ್‌ಗಳಲ್ಲಿ ಚಂದ್ರನೆಡೆಗೆ ಪ್ರಯಾಣಿಸಲಾಯಿತು. ಬಯೋ ಟೆಕ್ನಾಲಜಿ, ಫಾರ್ಮಾ ಕೈಗಾರಿಕೆಗಳು, ಐಟಿ ಕ್ಷೇತ್ರ ಗಳು ರಾಜ್ಯದಲ್ಲಿವೆ. ಅಮೆರಿಕದ ನಂತರ ಬೆಂಗಳೂರಿನ ಸಿಲಿಕಾನ್ ವ್ಯಾಲಿ ಖ್ಯಾತಿ ಗಳಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ 400 ಸಂಶೋಧನಾ ಕೇಂದ್ರಗಳಿದ್ದು, ಅವುಗಳಲ್ಲಿ 180 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಾಗಿವೆ. ಎಂದರು.
PublicNext
11/05/2022 12:44 pm