ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾವು ಬೆಳೆದ ರೈತರಿಗೆ ನಷ್ಟವಾದ್ರೆ ಸರ್ಕಾರ‌ ಭರಿಸುತ್ತಾ?: ಡಿಕೆಶಿ ಪ್ರಶ್ನೆ

ಬೆಂಗಳೂರು: ಸರಣಿ ವಿವಾದಗಳ ನಂತರ ಈಗ ಮಾವು ಬೆಳೆಯನ್ನು ಮುಸ್ಲಿಮರಿಂದ ಖರೀದಿಸಬಾರದು ಎಂಬ ವಿವಾದ ಚಾಲ್ತಿಯಲ್ಲಿದೆ. ಸದ್ಯ ಮಾವಿನ ವ್ಯಾಪಾರ-ವಹಿವಾಟು ಸೀಸನ್ ಇರುವುದರಿಂದ ಈ ವಿವಾದಕ್ಕೆ ಮಹತ್ವ ಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೋಮು ದ್ವೇಷ ಸೃಷ್ಟಿಸಿ ಆ ಮೂಲಕ ಮತ್ತೆ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿ ಬಿಜೆಪಿ ಇದೆ‌ ಎಂದಿದ್ದಾರೆ.

'ಮಾವು ಮಾರಾಟ ವಿವಾದ ಬಿಜೆಪಿಯ ರಾಜಕೀಯ ಅಜೆಂಡಾ. ಬಿಜೆಪಿ ರೈತರ ಬದುಕಿಗೆ ಸಮಾಧಿ ಕಟ್ಟಲು ಹೊರಟಿದೆ. ವಿವಾದದಿಂದ ರೈತರಿಗೆ ನಷ್ಟವಾದರೆ ಸರ್ಕಾರ ಭರಿಸುತ್ತದೆಯೇ? ಬಿಜೆಪಿ ಮತ ಧ್ರುವೀಕರಣಕ್ಕಾಗಿ ಈ ರೀತಿ ಮಾಡುತ್ತಿದೆ. ಜನರ ಯೋಚನೆಯ ದಿಕ್ಕು ತಪ್ಪಿಸಿ, ಕೋಮು ದ್ವೇಷ ಸೃಷ್ಟಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ' ಎಂದು ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್ ಬಿಜೆಪಿ ನಡೆ ವಿರುದ್ಧ ಕಿಡಿ ಕಾರಿದ್ದಾರೆ.

Edited By : Nagaraj Tulugeri
PublicNext

PublicNext

07/04/2022 04:37 pm

Cinque Terre

79.65 K

Cinque Terre

18

ಸಂಬಂಧಿತ ಸುದ್ದಿ