ಬೆಂಗಳೂರು: ಕೇವಲ ನಾವು ಹೇಳಿದ್ದಕ್ಕೆ ಮಾತ್ರವಲ್ಲ, ಅವರ ಸಚಿವರೂ ಕೂಡ ಉಗಿದಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೈಟ್ ಕರ್ಫ್ಯೂ ವಾಪಸ್ ಪಡೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಟ್ ಕರ್ಫ್ಯೂ ಸಿಎಂ ಯಡಿಯೂರಪ್ಪ ಅವರ ವಿಚಾರ ಅಲ್ಲ, ಆರೊಗ್ಯ ಸಚಿವ ಡಾ. ಕೆ.ಸುಧಾಕರ್ ವಿಚಾರವಾಗಿದೆ. ಸುಧಾಕರ್ ಬಗ್ಗೆ ಚಿಂತೆ ಇಲ್ಲ, ಸಿಎಂ ಯಡಿಯೂರಪ್ಪ ಯಾಕೆ ಇಷ್ಟು ವೀಕ್ ಆಗಿದ್ದಾರೆ ಅಂತ ನನಗೆ ಚಿಂತೆಯಾಗಿದೆ. ಅವನೊಬ್ಬ ಹೇಳಿದ ಅಂತ ನೈಟ್ ಕರ್ಫ್ಯೂಗೆ ಸಹಿ ಹಾಕಿದ್ದಾರೆ ಯಡಿಯೂರಪ್ಪ ಎಂದು ವ್ಯಂಗ್ಯವಾಡಿದರು.
PublicNext
25/12/2020 03:56 pm