ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಎಂಸಿ ಸೇರಿದ ಪತ್ನಿಗೆ - ವಿಚ್ಛೇದನಕ್ಕೆ ಮುಂದಾದ ಬಿಜೆಪಿ ಸಂಸದ!

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ ಸೇರಿದ ಪತ್ನಿ ಸುಜಾತಾ ಮೊಂಡಾಲ್ ಖಾನ್ ಅವರಿಗೆ ಬಿಜೆಪಿ ಸಂಸದ ಸೌಮಿತ್ರಾ ಖಾನ್ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಜಾತಾ ಮೊಂಡಾಲ್ ''ನಾನು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಆದರೆ ಸದ್ಯಕ್ಕೆ ಮೂಲ ಬಿಜೆಪಿಗರಿಗೇ ಪಕ್ಷದಲ್ಲಿ ಬೆಲೆ ಗೌರವ ಇಲ್ಲದಂತಾಗಿದೆ. ಇದೇ ಕಾರಣಕ್ಕಾಗಿ ಬಿಜೆಪಿ ತ್ಯಜಿಸುತ್ತಿದ್ದೇನೆ. ಅಲ್ಲದೆ ಓರ್ವ ಮಹಿಳೆಯಾಗಿ ನನಗೆ ಆ ಪಕ್ಷದಲ್ಲಿರುವುದು ಕಷ್ಟವಾಗುತ್ತಿದೆ'' ಎಂದು ಹೇಳಿದ್ದಾರೆ.

''ಬಿಜೆಪಿಯು ತೃಣಮೂಲ ಕಾಂಗ್ರೆಸ್​ನಲ್ಲಿರುವ ಎಲ್ಲಾ ರಾಜಕಾರಣಿಗಳನ್ನು ಪಕ್ಷಾಂತರದ ಹೆಸರಿನಲ್ಲಿ ಭ್ರಷ್ಟಗೊಳಿಸುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಬಿಜೆಪಿ ಏನೇ ಮಾಡಿದರೂ ಕುಗ್ಗಿಸಲು ಸಾಧ್ಯವಿಲ್ಲ. ಹೀಗಾಗಿ ಓರ್ವ ಮಹಿಳೆಯಾಗಿ ಮಮತಾ ಬ್ಯಾನರ್ಜಿ ಜೊತೆಗೆ ಕೆಲಸ ಮಾಡುವುದು ನನಗೆ ಗೌರವಾನ್ವಿತವಾದ ವಿಚಾರ ಎಂದು ನಾನು ಭಾವಿಸುತ್ತೇನೆ'' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

21/12/2020 05:31 pm

Cinque Terre

86.95 K

Cinque Terre

2

ಸಂಬಂಧಿತ ಸುದ್ದಿ