ಕೊಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಟಿಎಂಸಿ, ಕಾಂಗ್ರೆಸ್, ಸಿಪಿಐ ಮತ್ತು ಸಿಪಿಎಂ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮಿಡ್ನಾಪುರದಲ್ಲಿ ನಡೆದ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪರಮಾಪ್ತ ಹಾಗೂ ಸುವೆಂದು ಅಧಿಕಾರಿಯೂ ಸೇರಿದಂತೆ ಒಟ್ಟು 10 ಶಾಸಕರು. ಟಿಎಂಸಿಯಿಂದ 7, ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್ ನಿಂದ ತಲಾ ಒಬ್ಬರು, ಟಿಎಂಸಿ ಸಂಸದ, ಮಾಜಿ ಟಿಎಂಸಿ ಸಂಸದ ಮತ್ತು ಒಬ್ಬ ಮಾಜಿ ಟಿಎಂಸಿ ಸಚಿವರು ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಇಷ್ಟೆ ಅಲ್ಲದೆ ಕನಿಷ್ಠ 25ಕ್ಕೂಹೆಚ್ಚು ಕಾರ್ಯಕರ್ತರು, ಹೆಚ್ಚಾಗಿ ಟಿಎಂಸಿಯಿಂದ, ಜಿಲ್ಲಾ ಮತ್ತು ಬ್ಲಾಕ್ ಮಟ್ಟಗಳ ಆರು ಮುಸ್ಲಿಂ ನಾಯಕರು ಕಮಲದ ಪಾಳಯಕ್ಕೆ ಬಂದಿದ್ದಾರೆ.
PublicNext
20/12/2020 07:41 am