ಹುಬ್ಬಳ್ಳಿ: ವಿಧಾನ ಪರಿಷತ್ತಿನಲ್ಲಿ ನಾವೆಲ್ಲರೂ ತಲೆ ತಗ್ಗಿಸುವ ಕೆಲಸ ಆಗಿದೆ.ಈ ರೀತಿಯ ಘಟನೆ ನಡೆಯದಂತೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿಸುವ ಕೆಲಸ ಮಾಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನ ಪರಿಷತ್ ಗಲಾಟೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ದೋಷಾರೋಪಣ ಮಾಡೋದಕ್ಕೆ ಸಾಕಷ್ಟು ವಿಷಯ, ವ್ಯಕ್ತಿಗಳು ಸಿಗ್ತಾರೆ.ಅದ್ದರಿಂದ ಪ್ರಜಾ ಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ಸ್ವಯಂ ಶಿಸ್ತಿನ ಪಾಲನೆಗೆ ನಾವೆಲ್ಲ ಒಗ್ಗಿಕೊಳ್ಳಬೇಕು ಎಂದರು.
PublicNext
19/12/2020 05:11 pm